ADVERTISEMENT

50 ವರ್ಷಗಳ ಹಿಂದೆ: ದೇವೇಗೌಡ –ಅರಸು ಸವಾಲು ಪ್ರಕರಣಕ್ಕೆ ವಿಧಾನಸಭೆ ಅಧಿವೇಶನ ಬಲಿ

50 ವರ್ಷಗಳ ಹಿಂದೆ

ಪ್ರಜಾವಾಣಿ ವಿಶೇಷ
Published 3 ಸೆಪ್ಟೆಂಬರ್ 2024, 19:14 IST
Last Updated 3 ಸೆಪ್ಟೆಂಬರ್ 2024, 19:14 IST
50 ವರ್ಷಗಳ ಹಿಂದೆ
50 ವರ್ಷಗಳ ಹಿಂದೆ   

ದೇವೇಗೌಡ –ಅರಸು ಸವಾಲು ಪ್ರಕರಣಕ್ಕೆ ವಿಧಾನಸಭೆ ಅಧಿವೇಶನ ಬಲಿ

ಬೆಂಗಳೂರು, ಸೆ. 3– ಸೂಚಿತ ಕಾರ್ಯಕ್ರಮ ದಂತೆ ಶನಿವಾರದವರೆಗೆ ಮುಂದುವರಿಯ
ಬೇಕಿದ್ದ ವಿಧಾನಸಭೆ ಅಧಿವೇಶನವು ಮೂರು ದಿನಗಳಿಂದ ಇತ್ಯರ್ಥ ಕಾಣದ ‘ಅರಸು–ದೇವೇಗೌಡರ ಸವಾಲು– ಜವಾಬುಗಳ ಪ್ರಕರಣ’ಕ್ಕೆ ಬಲಿಯಾಗಿ, ಅನಿರ್ದಿಷ್ಟ ಕಾಲದವರೆಗೆ ಮುಂದಕ್ಕೆ ಹೋಯಿತು.

ತಾವು ಬಿಜಾಪುರದಲ್ಲಿ ಮಾಡಿದ ಭಾಷಣ ಮತ್ತು ಅದಕ್ಕೆ ಸಂಬಂಧಿಸಿದಂತೆ ವಿರೋಧ ಪಕ್ಷದ ನಾಯಕರು ಮಾಡಿರುವ ಸವಾಲಿನ ಬಗ್ಗೆ ಯಾವುದೇ ಹೇಳಿಕೆ ಕೊಡಲು ನಿರಾಕರಿಸಿದ ಮುಖ್ಯಮಂತ್ರಿ ಶ್ರೀ ದೇವರಾಜ ಅರಸು ಅವರು ‘ಈ ಸಂದರ್ಭದಲ್ಲಿ ಹೇಳಿಕೆ ಸೂಕ್ತವಲ್ಲ; ಈ ಸಭೆಯಲ್ಲಿ ಹೇಳಿಕೆ ಕೊಡುವ ಅಗತ್ಯವೂ ಇಲ್ಲ’ ಎಂದು ಒಂದು ಘಟ್ಟದಲ್ಲಿ ವಿರೋಧ ಪಕ್ಷದವರಿಗೆ ಸ್ಪಷ್ಟಪಡಿಸಿದರು.

ADVERTISEMENT

ಕೊಯ್ನಾ ಜಲಾಶಯದಲ್ಲಿ ರಾಜ್ಯಕ್ಕೆ ಪಾಲು ಇಲ್ಲ: ಅರಸು

ಬೆಂಗಳೂರು, ಸೆ. 3– ಮಹಾರಾಷ್ಟ್ರದ ಕೊಯ್ನಾ ಜಲಾಶಯದಲ್ಲಿ ಕರ್ನಾಟಕದ ಪಾಲು ಪಡೆಯಲು ಇದ್ದ ಅವಕಾಶವನ್ನು ಕಳೆದುಕೊಂಡ ವಿಷಯವನ್ನು ಮುಖ್ಯಮಂತ್ರಿ ಶ್ರೀ ಡಿ.ದೇವರಾಜ ಅರಸು ಅವರು ಇಂದು ವಿಧಾನಸಭೆಯಲ್ಲಿ ಬಹಿರಂಗಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.