ADVERTISEMENT

50 ವರ್ಷಗಳ ಹಿಂದೆ | ಕ್ವಿಂಟಲ್‌ ಗೋಧಿಗೆ ಗರಿಷ್ಠ ₹150: ಕೇಂದ್ರ ಸುಗ್ರೀವಾಜ್ಞೆ

​ಪ್ರಜಾವಾಣಿ ವಾರ್ತೆ
Published 6 ಜೂನ್ 2024, 23:42 IST
Last Updated 6 ಜೂನ್ 2024, 23:42 IST
50 ವರ್ಷಗಳ ಹಿಂದೆ..
50 ವರ್ಷಗಳ ಹಿಂದೆ..   

ಕೂಗು ಕೈಮೀರುವ ಮುನ್ನ ಕೇಂದ್ರದಿಂದ ನಿರ್ದಿಷ್ಟ ನೀತಿಗೆ ಕರ್ನಾಟಕ ರಾಜ್ಯದ ಸಲಹೆ

ಬೆಂಗಳೂರು, ಜೂನ್‌ 6: ಸ್ಥಳೀಯರಿಗೆ ಉದ್ಯೋಗ ಎಂಬ ಆಗ್ರಹ ನೆರೆರಾಜ್ಯಗಳಲ್ಲಿ ಕೆಟ್ಟ ರೂಪ ತಾಳುತ್ತಿರುವುದನ್ನು ಕಂಡು ಕಳವಳಗೊಂಡಿರುವ ಕರ್ನಾಟಕವು, ‘ಈ ದಿಸೆಯಲ್ಲಿ ಕೇಂದ್ರ ಸರ್ಕಾರವೇ ಒಂದು ನಿರ್ದಿಷ್ಟ ನೀತಿ ರೂಪಿಸಿ ಎಲ್ಲ ರಾಜ್ಯಗಳು ಅದಕ್ಕೆ ಬದ್ಧವಾಗಿರುವಂತೆ ಮಾಡುವ ವ್ಯವಸ್ಥೆ ಮಾಡಬೇಕು’ ಎಂದು ಸಲಹೆ ಮಾಡಲಿದೆ.

ಅಂಥ ಒಂದು ನೀತಿಯನ್ನು ರಾಷ್ಟ್ರೀಯ ಅಭಿವೃದ್ಧಿ ಮಂಡಳಿ ಅಥವಾ ರಾಷ್ಟ್ರೀಯ ಐಕ್ಯ ಮಂಡಳಿ ತಯಾರಿಸಬೇಕು, ಈ ಕಾರ್ಯದಲ್ಲಿ ಪ್ರಧಾನಿಯವರೇ ಮುತುವರ್ಜಿ ವಹಿಸಿ ಕೆಲಸ ಮಾಡಬೇಕು ಎಂಬುದು ರಾಜ್ಯ ಸರ್ಕಾರದ ಆಶಯವಾಗಿದೆ.

ADVERTISEMENT

ನವದೆಹಲಿ, ಜೂನ್‌ 6: ಅತ್ಯಗತ್ಯ ವಸ್ತುಗಳ ಕಾಯ್ದೆಯಂತೆ ಕ್ವಿಂಟಲ್‌ ಗೋಧಿಗೆ 150 ರೂಪಾಯಿ ಗರಿಷ್ಠ ಮಾರಾಟದ ಬೆಲೆ ನಿಗದಿ ಮಾಡಿ ಕೇಂದ್ರ ಸರ್ಕಾರವು ಇಂದು ಸುಗ್ರೀವಾಜ್ಞೆ ಹೊರಡಿಸಿತು.

ಆಹಾರ ಕೊರತೆಯಿರುವ ರಾಜ್ಯಗಳಲ್ಲಿ ಗೋಧಿ ಮಾರಾಟ ಬೆಲೆಯನ್ನು ಸೂಕ್ತವಾದ ಮಟ್ಟಕ್ಕೆ ಸೀಮಿತಗೊಳಿಸಲು ಕೈಗೊಂಡ ಈ ಕ್ರಮವು ಈಗಿಂದೀಗಲೇ ಜಾರಿಗೆ ಬರುತ್ತದೆ.

ಸರ್ಕಾರ ನಿಗದಿ ಮಾಡಿದ ಗರಿಷ್ಠ ಮಾರಾಟದ ಬೆಲೆಯಲ್ಲೇ ಎಲ್ಲ ಸಾಗಾಣಿಕೆ ವೆಚ್ಚ ಮತ್ತು ತೆರಿಗೆಗಳೂ ಸೇರಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.