ಸಾಮಾಜಿಕ, ಆರ್ಥಿಕ ಸಮೀಕ್ಷೆ ಮುಗಿಯದೆ ವರದಿ ಅಸಂಭವ
ಬೆಂಗಳೂರು, ಜ. 23– ಸಾಮಾಜಿಕ, ಆರ್ಥಿಕ ಸಮೀಕ್ಷೆ ಕಾರ್ಯ ಪೂರ್ಣವಾಗದ ಹೊರತು ರಾಜ್ಯದ ಹಿಂದುಳಿದ ವರ್ಗಗಳ ಆಯೋಗ ತನ್ನ ವರದಿಯನ್ನು ಸಲ್ಲಿಸುವಂತಿಲ್ಲ.
ಆಯೋಗದ ಶಿಫಾರಸುಗಳುನ್ಯಾಯಾಲಯದಲ್ಲಿ ನಿಲ್ಲಬೇಕಾದರೆ ಅವುಗಳಿಗೆ ಸಮೀಕ್ಷೆಯ ಆಧಾರ ಅಗತ್ಯ ಎಂದು ಅದರ ಅಧ್ಯಕ್ಷ ಎಲ್.ಜಿ. ಹಾವನೂರ ಅವರು ಇಂದು ಇಲ್ಲಿ ಸುದ್ದಿಗಾರರಿಗೆ ಸ್ಪಷ್ಟಪಡಿಸಿದರು.
ಸಾಮಾಜಿಕ, ಆರ್ಥಿಕ ಸಮೀಕ್ಷೆ ಕಾರ್ಯ ಶೇ 50ರಷ್ಟು ಮಾತ್ರ ಈವರೆಗೆ ಮುಗಿದಿದೆ. ಉಳಿದದ್ದು ಜುಲೈ ಹೊತ್ತಿಗೆ ಸಿದ್ಧವಾಗುವ ನಿರೀಕ್ಷೆಯಿದೆ. ರಾಜ್ಯದ ಒಂಬತ್ತು ಜಿಲ್ಲೆಗಳಲ್ಲಿ ಅದು ಮುಗಿದಿದೆ. ಸಂಕಲನ ಕಾರ್ಯ ಇನ್ನೂ ಶೇ 5ರಷ್ಟು ಮಾತ್ರ ಸಿದ್ಧವಾಗಿದೆ. ಸಮೀಕ್ಷೆ ಕಾರ್ಯ ಕಳೆದ ಅಕ್ಟೋಬರ್ ಅಂತ್ಯದಲ್ಲಿ ಪ್ರಾರಂಭವಾಯಿತು.
ಕೇರಳ ಮತ್ತಿತರ ರಾಜ್ಯಗಳಿಗೆ ಹೋಲಿಸಿದರೆ ಹಿಂದುಳಿದ ವರ್ಗಗಳ ಆಯೋಗದ ಕಾರ್ಯ ಪ್ರಗತಿ ವಿಳಂಬವೇನೂ ಆಗಿಲ್ಲ ಎಂದು ಹಾವನೂರ ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.