ADVERTISEMENT

50 ವರ್ಷಗಳ ಹಿಂದೆ | ರಾಜ್ಯ ಕಾಂಗ್ರೆಸ್ ನಾಯಕತ್ವ ಬದಲಾವಣೆಗೆ ಯತ್ನ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2024, 0:14 IST
Last Updated 20 ಮಾರ್ಚ್ 2024, 0:14 IST
50 ವರ್ಷಗಳ ಹಿಂದೆ
50 ವರ್ಷಗಳ ಹಿಂದೆ   

ರಾಜ್ಯ ಕಾಂಗ್ರೆಸ್ ನಾಯಕತ್ವ ಬದಲಾವಣೆಗೆ ಕೆಲವು ಸಂಸತ್ ಸದಸ್ಯರ ಯತ್ನ

ಬೆಂಗಳೂರು, ಮಾರ್ಚ್ 19– ರಾಜ್ಯದ ಕೆಲ ಸಂಸತ್ ಸದಸ್ಯರು ಈ ತಿಂಗಳ ಅಂತ್ಯದೊಳಗೆ ಪ್ರಧಾನಿ ಹಾಗೂ ಕಾಂಗ್ರೆಸ್ ಅಧ್ಯಕ್ಷರನ್ನು ಕಂಡು, ರಾಜ್ಯದ ಕಾಂಗ್ರೆಸ್ ಪಕ್ಷದ ನಾಯಕತ್ವದಲ್ಲಿ ಬದಲಾವಣೆಯಾಗಬೇಕೆಂದು ಒತ್ತಾಯ ಮಾಡಲಿದ್ದಾರೆ.

ವಿಧಾನಸಭೆಯ ಮರು ಚುನಾವಣೆಯಲ್ಲಿ ಕಾಂಗ್ರೆಸ್ಸಿಗಾದ ಸೋಲು ಹಾಗೂ ಅದಕ್ಕೆ ಸಂಬಂಧಿಸಿದ ಬೆಳವಣಿಗೆಯ ಕಾರಣ ‘ಏಕಾಭಿಪ್ರಾಯವುಳ್ಳ’ ಸಂಸತ್ ಸದಸ್ಯರು ಸರ್ಕಾರ ಹಾಗೂ ಸಂಸ್ಥೆಯಲ್ಲಿ ನಾಯಕತ್ವದ ಬದಲಾವಣೆಗೆ ಪ್ರಯತ್ನ ಮಾಡಲಿದ್ದಾರೆ ಎಂದು ಸಂಸದ ಎಸ್‌.ಬಿ. ಪಾಟೀಲ್ ತಿಳಿಸಿದರು.

ADVERTISEMENT

ಬಿಹಾರದಲ್ಲಿ ವ್ಯಾಪಕ ಹಿಂಸಾಚಾರ ಐದು ಕಡೆ ಗುಂಡಿಗೆ 10 ಜನ ಬಲಿ

ಪಟನಾ, ಮಾರ್ಚ್ 19– ಪಟನಾ, ಮುಂಘೇರ್, ಛಾಪ್ಡ, ದೇವಗಢ ಮತ್ತು ರಾಂಚಿಗಳಲ್ಲಿ ಇಂದು ಲೂಟಿ ಮತ್ತು ಬೆಂಕಿ ಹಚ್ಚುವ ಕೃತ್ಯಗಳಲ್ಲಿ ತೊಡಗಿದ್ದ ಗುಂಪುಗಳ ಮೇಲೆ ಗುಂಡು ಹಾರಿಸಿದ ಪರಿಣಾಮ ಕನಿಷ್ಠ 10 ಜನ ಸತ್ತು 31 ಜನ ಗಾಯಗೊಂಡರು.

ಪಟನಾದಲ್ಲಿ ಇಡೀ ವಿಶ್ವವಿದ್ಯಾನಿಲಯದ ಆವರಣವನ್ನು ಸೇನೆಗೆ ಒಪ್ಪಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.