ADVERTISEMENT

50 ವರ್ಷಗಳ ಹಿಂದೆ: ಮಂಗಳವಾರ 23–11–1971

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2021, 21:15 IST
Last Updated 22 ನವೆಂಬರ್ 2021, 21:15 IST
   

ಅವಸರದಲ್ಲಿ ಸುಗ್ರೀವಾಜ್ಞೆಗಳ ಘೋಷಣೆಗೆ ಸಂಸತ್‌ ಆಕ್ಷೇಪ

ನವದೆಹಲಿ, ನ. 22– ಸಂಸತ್ತಿನ ಎರಡು ಅಧಿವೇಶನಗಳ ನಡುವೆ ಹಲವಾರು ಸುಗ್ರೀವಾಜ್ಞೆಗಳನ್ನು ಘೋಷಿಸಿರುವುದರ ವಿರುದ್ಧ ಇಂದು ಲೋಕಸಭೆಯಲ್ಲಿ ವಿರೋಧ ಪಕ್ಷಗಳು ಮತ್ತೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದವು.

ಅಂಚೆ, ರೈಲ್ವೆ ದರ ಮತ್ತು ಒಳ ದೇಶಗಳಲ್ಲಿ// ವಿಮಾನ ಪ್ರಯಾಣಗಳ ಮೇಲೆ ಸುಂಕ ವಿಧಿಸಿರುವ ಸುಗ್ರೀವಾಜ್ಞೆಗಳ ಬದಲು ಕಾನೂನುಗಳನ್ನು ಜಾರಿಗೆ ತರುವ ವಿಧೇಯಕಗಳನ್ನು ಸರ್ಕಾರ ಮಂಡಿಸಿದಾಗ ಈ ಆಕ್ಷೇಪ ಕೇಳಿ ಬಂದಿತು.

****

ADVERTISEMENT

ಏರುತ್ತಿರುವ ಬೆಲೆಗಳ ವಿರುದ್ಧ ಗ್ರಾಹಕ ನಿರೋಧಕ್ಕೆ ಕರೆ

ನವದೆಹಲಿ, ನ. 22– ಬಳಕೆದಾರರ ಹಿತರಕ್ಷಣೆ ಮಾಡುವ ಹಾಗೂ ಯಾವ ರಾಜಕೀಯ ಪಕ್ಷಕ್ಕೂ ಸೇರದ ಭಾರತೀಯ ಬಳಕೆದಾರರ ಸಂಘವನ್ನು ಕೇಂದ್ರ ಅರ್ಥ ಸಚಿವ ವೈ.ಬಿ. ಚವಾಣ್‌ ಇಂದು ಇಲ್ಲಿ ಉದ್ಘಾಟಿಸಿದರು.

ಏರುತ್ತಿರುವ ಬೆಲೆಗಳ ಬಗ್ಗೆ ತಮ್ಮ ಕಳವಳವನ್ನು ವ್ಯಕ್ತಪಡಿಸಿದ ಚವಾಣ್‌ ಅವರು, ಈ ಪಿಡುಗಿನ ವಿರುದ್ಧ ಹೋರಾಟ ನಡೆಸಲು ಜನತೆ ಎಚ್ಚೆತ್ತುಕೊಳ್ಳಬೇಕೆಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.