ವಿಧಾನಸೌಧಕ್ಕೆ ನಡೆದೇ ಬರಲು ಅರಸು ಉದ್ದೇಶ
ಬೆಂಗಳೂರು, ನ. 21– ಪೆಟ್ರೋಲ್ ಪೂರೈಕೆ ಕೊರತೆಯನ್ನು ಗಮನಿಸಿ, ಮುಖ್ಯಮಂತ್ರಿ ಶ್ರೀ ದೇವರಾಜ ಅರಸು ಅವರು, ತಮ್ಮ ಅಧಿಕೃತ ನಿವಾಸದಿಂದ ವಿಧಾನಸೌಧಕ್ಕೆ ನಡೆದು ಬಂದು, ನಡೆದು ಮರಳುವ ಪರಿಪಾಟ ಆರಂಭಿಸುವ ಉದ್ದೇಶ ಹೊಂದಿದ್ದಾರೆ.
ಕುಮಾರಪಾರ್ಕ್‌ನಲ್ಲಿರುವ ನಿವಾಸದಿಂದ ವಿಧಾನಸೌಧಕ್ಕೆ ಇರುವ ದೂರ ಸುಮಾರು ಒಂದು ಮೈಲಿ. ‘ಇನ್ನು ಮುಂದೆ ನಡೆದು ಕೊಂಡೇ ಆ ದೂರವನ್ನು ಕ್ರಮಿಸಿ ನಾನು ಕಚೇರಿಗೆ ಬರಬಹುದು’ ಎಂದು ಅವರು ಇಂದು ಇಲ್ಲಿ ವರದಿಗಾರರಿಗೆ ತಿಳಿಸಿದರು.
ಏರ್‌ಲೈನ್ಸ್ ಸಿಬ್ಬಂದಿ– ಆಡಳಿತದ ನಡುವೆ ಸಂಧಾನ ವಿಫಲ
ನವದೆಹಲಿ, ನ. 21– ವಿಮಾನ ಸಾರಿಗೆ ನೌಕರರ ಚಳವಳಿ ಅಂತ್ಯ ಕುರಿತು ಇಂಡಿಯನ್ ಏರ್‌ಲೈನ್ಸ್ ಆಡಳಿತ ವರ್ಗ ಮತ್ತು ಏರ್ ಕಾರ್ಪೊರೇಷನ್ ನೌಕರರ ಸಂಘದ ಪ್ರತಿನಿಧಿಗಳ ನಡುವೆ ಇಂದು ನಡೆದ ಸಂಧಾನ ಮಾತುಕತೆ ಮುರಿದುಬಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.