ADVERTISEMENT

50 ವರ್ಷಗಳ ಹಿಂದೆ: ಬುಧವಾರ, 25-10-1972

ಪ್ರಜಾವಾಣಿ ವಿಶೇಷ
Published 24 ಅಕ್ಟೋಬರ್ 2022, 21:30 IST
Last Updated 24 ಅಕ್ಟೋಬರ್ 2022, 21:30 IST
   

ಭಯಾನಕ ಅಭಾವ ಸ್ಥಿತಿ ಎದುರಿಸಲು ಉಚಿತ ಗೋದಿ ಹಂಚಲು ನಿರ್ಧಾರ

ಬೆಂಗಳೂರು, ಅ. 24– ರಾಜ್ಯದ ಕೆಲವು ಜಿಲ್ಲೆಗಳಲ್ಲಿನ ಅಭಾವ ‘ಭಯಾನಕ’ವಾಗಿರುವು ದನ್ನು ಎದುರಿಸಲು ಅರಣ್ಯ ಪ್ರದೇಶಗಳಿಗೆ ಜಾನುವಾರಿನ ಸಾಕಾಣಿಕೆ ಹಾಗೂ ದುರ್ಬಲರಿಗೆ ಉಚಿತವಾಗಿ ಗೋದಿ ಹಂಚಿಕೆ ಕ್ರಮಗಳನ್ನು ಇಂದು ಮಂತ್ರಿಮಂಡಲದ ಸಭೆ ತೀರ್ಮಾನಿಸಿತು.

ದುರ್ಬಲರಿಗಾಗಿ ಗಂಜಿ ಕೇಂದ್ರಗಳನ್ನು ಸ್ಥಾಪಿಸುವ ಬದಲು ಉಚಿತವಾಗಿ ಗೋದಿ ಒದಗಿಸುವುದು ಸೂಕ್ತ ಎಂಬುದು ಸರ್ಕಾರದ ಅಭಿಪ್ರಾಯವಾಗಿದೆ.

ADVERTISEMENT

ನೂರು ಜನ ಹಸಿವಿಗೆ ಬಲಿ

ಬೆಂಗಳೂರು, ಅ. 24– ಹೈದ್ರಾಬಾದ್‌ ಕರ್ನಾಟಕದ ಜಿಲ್ಲೆಗಳಲ್ಲಿ ಕಳೆದ ಕೆಲವು ದಿನಗಳಲ್ಲಿ ಸುಮಾರು ನೂರು ಮಂದಿ ಬಡವರು ಹಸಿವಿನಿಂದ ಪ್ರಾಣನೀಗಿದ್ದಾರೆಂದು ಇಂದು ಇಲ್ಲಿ ತಿಳಿಸಿದ ಕಮ್ಯುನಿಸ್ಟ್‌ ಶಾಸಕ ಎ.ಎನ್‌.ಪಾಟೀಲ್‌ ಅವರು, ಜನರಲ್ಲಿ ಗಾಬರಿ ಹುಟ್ಟಿಸದಿರಲು ಈ ಸುದ್ದಿಯನ್ನು ಸರ್ಕಾರ ಮರೆಮಾಚುತ್ತಿದೆ ಎಂದಿದ್ದಾರೆ.

ಗುಲ್ಬರ್ಗ ಜಿಲ್ಲೆಯಲ್ಲಿ 11 ಸಾವಿನ ಪ್ರಕರಣಗಳಿವೆ, ಇತರ ಪ್ರದೇಶಗಳಲ್ಲೂ ಸುಮಾರು ನೂರು ಮಂದಿ ಸಾವಿಗೀಡಾಗಿರುವ ಅನಧಿಕೃತ ಸುದ್ದಿಗಳಿವೆ’ ಎಂದು ಪಾಟೀಲರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.