ಚುನಾವಣೆ ವ್ಯವಸ್ಥೆ ಸುಧಾರಣೆ ಮುಕ್ತ ಮನಸ್ಸಿನ ಚರ್ಚೆಗೆ ಕರೆ
ನವದೆಹಲಿ, ಅ.23– ಚುನಾವಣೆ ವ್ಯವಸ್ಥೆ ಸುಧಾರಣೆ ಕುರಿತ ಜನ ಸಂಘದ ಆರು ಅಂಶಗಳ ಸೂತ್ರವನ್ನು ಪಕ್ಷದ ಅಧ್ಯಕ್ಷ ಎಲ್.ಕೆ.ಅಡ್ವಾಣಿ ಅವರು ಇಂದು ಸುದ್ದಿಗಾರರಿಗೆ ವಿವರಿಸಿದರು. ಈ ಪ್ರಶ್ನೆಯು ಮುಂದಿನ ಸಂಸತ್ ಅಧಿವೇಶನದ ಪ್ರಮುಖ ಚರ್ಚಾ ವಿಷಯವಾಗುವುದೆಂದು ಅವರು
ಹೇಳಿದರು.
ಚುನಾವಣೆ ವ್ಯವಸ್ಥೆ ಸುಧಾರಣೆ ಪ್ರಶ್ನೆಯನ್ನು ಸರ್ಕಾರವು ಮುಕ್ತ ಮನಸ್ಸಿನಿಂದ ಪರಿಶೀಲಿಸಿದಾಗ ಮಾತ್ರವೇ ಹದಗೆಟ್ಟಿರುವ ಸರ್ಕಾರ ಹಾಗೂ ರಾಜಕೀಯ ಪಕ್ಷಗಳ ನಡುವಣ ಸಂಬಂಧವನ್ನು ಸರಿಪಡಿಸಲು ಸಾಧ್ಯ ಎಂದು ಅವರು ನುಡಿದರು.
ಹಣದ ಹೊಳೆಗೆ ಅವಕಾಶ: ಕೃಪಲಾನಿ
ನವದೆಹಲಿ, ಅ. 23– ಜನತಾ ಪ್ರಾತಿನಿಧ್ಯ ಶಾಸನವನ್ನು ತಿದ್ದುಪಡಿಗೊಳಿಸಿ ಸರ್ಕಾರ ಈಚೆಗೆ ಹೊರಡಿಸಿದ ಸುಗ್ರೀವಾಜ್ಞೆ ಚುನಾವಣೆಗಳಿಗೆ ಧನಾಢ್ಯರ ಹಣ ನಿರಾತಂಕವಾಗಿ ಹರಿದು ಬರುವುದಕ್ಕೆ ಅವಕಾಶ ಕೊಡುವುದೆಂದು ಆಚಾರ್ಯ
ಜೆ.ಬಿ.ಕೃಪಲಾನಿ ಅವರು ಇಂದು ಹೇಳಿ ಆ ಹಣವನ್ನು ಅಧಿಕಾರಾರೂಢ ಪಕ್ಷ ಮಾತ್ರ ಸಂಗ್ರಹಿಸಿಕೊಳ್ಳ ಬಹುದು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.