
50 ವರ್ಷಗಳ ಹಿಂದೆ
ವಿದೇಶಗಳ ವ್ಯವಹಾರದಲ್ಲಿ ಭಾರತ ಕೈಹಾಕದು: ಪ್ರಧಾನಿ ಸ್ಪಷ್ಟನೆ
ನವದೆಹಲಿ, ಮೇ 12– ನೆರೆಯ ರಾಷ್ಟ್ರಗಳು ಅಥವಾ ಬೇರೆ ಯಾವುದೇ ರಾಷ್ಟ್ರದ ವ್ಯವಹಾರದಲ್ಲಿ ಯಾವುದೇ ರೀತಿಯಲ್ಲಿ ಹಸ್ತಕ್ಷೇಪ ಮಾಡಲು ಭಾರತಕ್ಕೆ ಅಪೇಕ್ಷೆ ಇಲ್ಲ ಎಂದು ಪ್ರಧಾನಿ ಇಂದಿರಾ ಗಾಂಧಿ ಅವರು ಇಂದು ಹೇಳಿದರು.
ನಮ್ಮ ನೀತಿಗಳ ಮೇಲೆ ಬಹಿರಂಗವಾಗಿ ಅಥವಾ ಸೂಕ್ಷ್ಮವಾಗಿ ಪ್ರಭಾವ ಬೀರುವ ಯಾವುದೇ ಪ್ರಯತ್ನಗಳನ್ನು ವಿರೋಧಿಸುವು ದಾಗಿಯೂ ಅವರು ನುಡಿದರು.
ಕೆಪಿಸಿಸಿ ರಚಿಸಿದ ಹಿಂದುಳಿದ ವರ್ಗಗಳ ಸಮಿತಿ ವರದಿ ಸಿದ್ಧ ಜಾರಿಗೆ ತರಲು ಕರೆ
ಬೆಂಗಳೂರು, ಮೇ 12– ಪ್ರದೇಶ ಕಾಂಗ್ರೆಸ್ ಸಮಿತಿ ರಚಿಸಿದ ಹಿಂದುಳಿದ ವರ್ಗಗಳ ಸಮಿತಿ ಒಂದು ತಿಂಗಳ ಅವಧಿಯಲ್ಲಿ ಸಿದ್ಧಗೊಳಿಸಿದ ವರದಿಯ ಸಾರಾಂಶವನ್ನು ಇಂದು ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಬಿಡುಗಡೆ ಮಾಡಿದ ಕೆಪಿಸಿಸಿ ಅಧ್ಯಕ್ಷ ಕೆ.ಎಚ್. ಪಾಟೀಲ್ ಅವರು, 120 ಪುಟಗಳಷ್ಟಿರುವ ಸಮಿತಿಯ
ಶಿಫಾರಸುಗಳನ್ನು ‘ತತ್‌ಕ್ಷಣ ಜಾರಿಗೆ ತರಲು’ ಸರ್ಕಾರ ಕ್ರಮ ಕೈಗೊಳ್ಳುವುದೆಂಬ ಆಶಯವನ್ನು ವ್ಯಕ್ತಪಡಿಸಿದರು.
ಎರಡೂವರೆ ವರ್ಷಗಳ ಹಿಂದೆ ಎಲ್.ಜಿ. ಹಾವನೂರು ಅವರ ಅಧ್ಯಕ್ಷತೆಯಲ್ಲಿ ನೇಮಿಸಲಾದ ಹಿಂದುಳಿದ ವರ್ಗಗಳ ಆಯೋಗ ತನ್ನ ಕೆಲಸವನ್ನು ಮುಗಿಸಿಲ್ಲವಾದುದರಿಂದ, ಕಳೆದ ಮಾರ್ಚ್ ತಿಂಗಳಲ್ಲಿ ನಡೆದ ಹಿಂದುಳಿದ ವರ್ಗಗಳ ತರಬೇತಿ ಶಿಬಿರದ ನಿರ್ದೇಶನದಂತೆ ತಾವೇ ಸ್ವತಃ ಸಮಿತಿಯನ್ನು ರಚಿಸಿರುವುದಾಗಿಯೂ ಪಾಟೀಲ್ ಅವರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.