‘ಸಂವಿಧಾನ ವಿರುದ್ಧ’ ಕಛತೀವು ಒಪ್ಪಂದದ ಖಂಡನೆ
ನವದೆಹಲಿ, ಜುಲೈ 23– ಕಛತೀವು ದ್ವೀಪವನ್ನು ಶ್ರೀಲಂಕಾಕ್ಕೆ ವರ್ಗಾಯಿಸುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಪ್ರತಿಭಟಿಸಿ ಸಂಸತ್ತಿನ ಉಭಯ ಸದನಗಳು ಇಂದು ಕಮ್ಯುನಿಸ್ಟೇತರ ವಿರೋಧ ಪಕ್ಷಗಳ ಸದಸ್ಯರೆಲ್ಲರೂ ಸಭಾತ್ಯಾಗ ಮಾಡಿದರು.
ಕಳೆದ ತಿಂಗಳು ಭಾರತ ಮತ್ತು ಶ್ರೀಲಂಕಾ ಪ್ರಧಾನಿಗಳು ಸಹಿ ಹಾಕಿದ ಆ ಒಪ್ಪಂದವು ‘ಸಂವಿಧಾನಕ್ಕೆ ವಿರುದ್ಧವಾಗಿದ್ದು ಅಕ್ರಮವಾದುದೆಂದು’ ವಿರೋಧ ಪಕ್ಷಗಳ ಸದಸ್ಯರು ಹೇಳಿದರು.
ಪ್ರಾಣ ತೆಗೆಯುವ ಕಲಬೆರಕೆ
ಕಲ್ಕತ್ತ, ಜುಲೈ 23– ಆಹಾರ, ಔಷಧ ಮತ್ತಿತರ ಸಾಮಾಗ್ರಿಗಳ ಕಲಬೆರಕೆಯಿಂದ 1973ರಲ್ಲಿ ಪಶ್ಚಿಮ ಬಂಗಾಳದಲ್ಲಿ ಕನಿಷ್ಠ 259 ಜನ ಸಾವಿಗೀಡಾದರು. ಸರಕಾರಿ ದಾಖಲೆಗಳೇ ಈ ಅಂಶ ನಿರೂಪಿಸುತ್ತವೆ.
ಖಾದ್ಯ ತೈಲಗಳು, ವನಸ್ಪತಿ, ಬೆಣ್ಣೆ, ಹಾಲು, ಚಹ, ಮೆಣಸಿನಕಾಯಿಯನ್ನೂ ಒಳಗೊಂಡಂತೆ ಸಾಂಬಾರ ಪದಾರ್ಥಗಳು– ಇದೆಲ್ಲಾ ಕಲಬೆರಕೆಗೆ ಗುರಿಯಾದವು. ನಕಲಿ ಪದಾರ್ಥಗಳನ್ನು ಹಸನು ಸರಕಿಗೆ ಬದಲಿಗೆ ಮಾರಿದ್ದು ಉಂಟು. ಕಲಬೆರಕೆ ಶಂಕೆ ಬಂದ ತಕ್ಷಣ ರಾಸಾಯನಿಕ ವಿಶ್ಲೇಷಣೆಗೆ ಇವನ್ನೆಲ್ಲಾ ಒಳಪಡಿಸಿದಾಗ ಅವುಗಳ ಬಣ್ಣ ಬಯಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.