‘ಉಳಿಯಬೇಕು, ಉಳಿಸಬೇಕು’
ಬೆಂಗಳೂರು, ಏ. 13– ಎಷ್ಟೇ ಕಠಿಣ ಪರಿಸ್ಥಿತಿ ಬಂದರೂ ಪ್ರಧಾನಮಂತ್ರಿ ಶ್ರೀಮತಿ ಇಂದಿರಾ ಗಾಂಧಿ ಪ್ರಧಾನಿ ಪೀಠದಲ್ಲಿ ಉಳಿದಿರುವ ಗುಟ್ಟೇನು?
ಹಣಕಾಸು ಸಚಿವ ಶ್ರೀ ರಾಮಕೃಷ್ಣ ಹೆಗಡೆ ಅವರ ವಿಶ್ಲೇಷಣೆಯ ರೀತ್ಯ ‘ಉಳಿಯಬೇಕು, ಉಳಿಸಬೇಕು’ ಎಂಬ ಮಹಿಳೆಯ ನಿಸರ್ಗದತ್ತ ಗುಣವೇ ಅದಕ್ಕೆ ಕಾರಣ. ‘ಇಷ್ಟು ಕಠಿಣ ಪರಿಸ್ಥಿತಿಯಲ್ಲಿ ಪ್ರಧಾನಿ ಪಟ್ಟದಲ್ಲಿ ಗಂಡಸಾಗಿದ್ದರೆ ಎಂದೋ ಬಿಟ್ಟು ಹೋಗಬೇಕಾಗಿತ್ತು’ ಎಂದರು.
ಹಾಸನ– ಸಕಲೇಶಪುರ ಮಧ್ಯೆ ಅ. 1ರಿಂದ ಗೂಡ್ಸ್ ರೈಲು ಸಂಚಾರ
ಮೈಸೂರು, ಏ. 13– ಇನ್ನು ಎರಡೂವರೆ ವರ್ಷಗಳಲ್ಲಿ (1972ನೇ ಸೆಪ್ಟೆಂಬರ್) ಸಂಚಾರಕ್ಕೆ ಪೂರ್ಣವಾಗಿ ಸಿದ್ಧವಾಗಲಿರುವ ಹಾಸನ– ಮಂಗಳೂರು ಮೀಟರ್‌ಗೇಜ್ ರೈಲು ವಿಭಾಗದ ಒಂದು ಭಾಗವಾದ ಹಾಸನ– ಸಕಲೇಶಪುರ ರೈಲು ಮಾರ್ಗ ಈ ವರ್ಷ ಸೆಪ್ಟೆಂಬರ್ ತಿಂಗಳಿನಲ್ಲಿ ಪೂರ್ಣಗೊಂಡು ಅಕ್ಟೋಬರ್ 1ರಿಂದ ಗೂಡ್ಸ್ ರೈಲು ಸಂಚಾರ ಆರಂಭವಾಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.