‘ಅನಗತ್ಯ ಅವಸರದ ಕಾರಣ ಭಾರತದಲ್ಲಿ ಶಿಕ್ಷಣ ಯೋಜನೆಗೆ ಪೆಟ್ಟು’
ಬಳ್ಳಾರಿ, ಜೂನ್ 3– ‘ಹೊಸ ಅಭಿಪ್ರಾಯ ಅಥವಾ ಯೋಜನೆಗಳ ಬಗ್ಗೆ ಮೊದಲು ಪ್ರಯೋಗ ನಡೆಸಿ, ಅನುಭವ ಪಡೆದು, ಅವಕ್ಕೆ ಕಾರ್ಯಸಾಧ್ಯವಾಗುವಂತಹ ರೂಪ ಕೊಟ್ಟು, ಆಮೇಲೆ ಅವನ್ನು ಜಾರಿಗೆ ತರುವ ಬದಲು, ಅನಗತ್ಯ ಅವಸರದಿಂದ ಅವನ್ನು ಜಾರಿಗೆ ತಂದ ಕಾರಣ, ಭಾರತದಲ್ಲಿ ಶಿಕ್ಷಣ ಯೋಜನೆಗಳಿಗೆ ಪೆಟ್ಟು ಬಿದ್ದಿದೆ ಎಂದು ಕೇಂದ್ರದ ಶಿಕ್ಷಣ ಸಚಿವ ಡಾ. ವಿ.ಕೆ.ಆರ್.ವಿ. ರಾವ್
ಅವರು ಇಂದು ಇಲ್ಲಿ ಹೇಳಿದರು.
ಪ್ರಾಯೋಗಿಕ ಯೋಜನೆಯಾದ ಪ‍್ರಥಮ ‘ತೀವ್ರ ಶಿಕ್ಷಣ ಜಿಲ್ಲೆ ಅಭಿವೃದ್ಧಿ’ ಯೋಜನೆಯನ್ನು ಉದ್ಘಾಟಿಸಿದ ಡಾ. ರಾವ್ ಅವರು, ಶಿಕ್ಷಣ ಕಾರ್ಯಕ್ರಮಗಳನ್ನು ಕೈಗಾರಿಕಾ, ನೀರಾವರಿ ಇಲ್ಲವೆ ವಿದ್ಯುತ್ ಯೋಜನೆಗಳಂತೆ ಯೋಜನೆ ಗಳಾಗಿ ಎಂದೂ ಪರಿಗಣಿಸಿಲ್ಲವೆಂದರು.
ಭೂಹೀನರಿಗೆ 11 ಲಕ್ಷ ಎಕರೆ ಬಂಜರು ಜಮೀನು ಹಂಚಲು ಆದೇಶ
ಬೆಂಗಳೂರು, ಜೂನ್ 3– ಸರ್ಕಾರಿ ಒಡೆತನದಲ್ಲಿರುವ ಸುಮಾರು 11 ಲಕ್ಷ ಎಕರೆ ಬಂಜರು ಜಮೀನನ್ನು ವರ್ಗೀಕರಿಸಿ, ಭೂಹೀನ ರೈತರಿಗೆ ವಿತರಣೆ ಮಾಡುವ ಕಾರ್ಯವನ್ನು ಮುಂದಿನ ನಾಲ್ಕು ತಿಂಗಳುಗಳೊಳಗೆ ಮುಗಿಸಬೇಕು ಎಂದು ಸರ್ಕಾರವು ಜಿಲ್ಲೆ, ತಾಲ್ಲೂಕು ಅಧಿಕಾರಿಗಳಿಗೆ ಆದೇಶ ನೀಡಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.