ADVERTISEMENT

50 ವರ್ಷಗಳ ಹಿಂದೆ | ಗುರುವಾರ, ಜೂನ್‌ 25 1970

​ಪ್ರಜಾವಾಣಿ ವಾರ್ತೆ
Published 24 ಜೂನ್ 2020, 16:14 IST
Last Updated 24 ಜೂನ್ 2020, 16:14 IST

ಭತ್ತ, ರಾಗಿ, ಜೋಳಕ್ಕೆ ಕನಿಷ್ಠ ಬೆಂಬಲ ಬೆಲೆ ನಿಗದಿ: ಕೇಂದ್ರದ ಆಜ್ಞೆ

ನವದೆಹಲಿ, ಜೂನ್‌ 25– 1970– 71ನೇ ಸಾಲಿಗೆ ‘ಸ್ಟ್ಯಾಂಡರ್ಡ್‌ ದರ್ಜೆಯ’ ಭತ್ತಕ್ಕೆ ಕ್ವಿಂಟಾಲಿಗೆ 49 ರೂ.ಗಳ ಕನಿಷ್ಠ ಬೆಂಬಲ ಬೆಲೆ ನೀಡಬೇಕೆಂಬ ಕೃಷಿ ಉತ್ಪನ್ನಗಳ ಬೆಲೆ ಆಯೋಗದ ಶಿಫಾರಸನ್ನು ಕೇಂದ್ರ ಸರ್ಕಾರ ಅಂಗೀಕರಿಸಿದೆ.

ರಾಗಿ, ಜೋಳ, ಸಜ್ಜೆ, ಮೆಕ್ಕೆಜೋಳಕ್ಕೆ ಕನಿಷ್ಠ ಸಹಾಯಕ ಬೆಲೆ ಕ್ವಿಂಟಾಲಿಗೆ 45 ರೂ.ಗಳಷ್ಟಿರುತ್ತದೆ.

ADVERTISEMENT

ಪೂರ್ವಪಾಕ್‌ ವಲಸೆಗಾರರಿಗೆ ಆಶ್ರಯ ನೀಡಲು ರಾಜ್ಯಗಳಿಗೆ ಕೇಂದ್ರದ ಸೂಚನೆ ನಿರೀಕ್ಷೆ

ನವದೆಹಲಿ, ಜೂನ್‌ 25– ಪೂರ್ವ ಪಾಕಿಸ್ತಾನದಿಂದ ಹೊಸದಾಗಿ ಬಂದಿರುವ ವಲಸೆಗಾರರಿಗೆ ಉದ್ಯೋಗ, ವಸತಿ ಒದಗಿಸುವ ಯೋಜನೆಗಳನ್ನು ಸಿದ್ಧಪಡಿಸುವಂತೆ ನಾಳೆ ನಡೆಯಲಿರುವ ಕೇಂದ್ರ ಪುನರ್ವಸತಿ ಇಲಾಖೆ ಕಾರ್ಯದರ್ಶಿ ಮತ್ತು ರಾಜ್ಯ ಸರ್ಕಾರಗಳ ಮುಖ್ಯ ಕಾರ್ಯದರ್ಶಿಗಳ ಸಭೆಯಲ್ಲಿ ರಾಜ್ಯಗಳಿಗೆ ಸೂಚಿಸುವ ನಿರೀಕ್ಷೆ ಇದೆ.

ಕಳೆದ ಐದೂವರೆ ತಿಂಗಳಿಂದೀಚೆಗೆ ಅಲ್ಪಸಂಖ್ಯಾತರ ಗುಂಪಿಗೆ ಸೇರಿದ ಸುಮಾರು 29 ಸಾವಿರಕ್ಕೂ ಹೆಚ್ಚು ಮಂದಿ ಪಾಕಿಸ್ತಾನದಿಂದ ಭಾರತಕ್ಕೆ ಬಂದಿದ್ದಾರೆ. ಇನ್ನೂ ಕೆಲವು ಸಾವಿರ ಮಂದಿ ಪೂರ್ವಪಾಕಿಸ್ತಾನದಿಂದ ಬಂದು ಅಸ್ಸಾಂ ಮತ್ತು ಪಶ್ಚಿಮ ಬಂಗಾಳದಲ್ಲಿನ ಬಂಧುಗಳೊಂದಿಗೆ ಇದ್ದಾರೆ ಎಂದು ತಿಳಿದುಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.