ಹಿಮಾಚಲ ಪ್ರದೇಶಕ್ಕೆ ರಾಜ್ಯ ಸ್ಥಾನಮಾನ: ಕೇಂದ್ರ ನಿರ್ಧಾರ
ನವದೆಹಲಿ, ಜುಲೈ 31– ಹಿಮಾಚಲ ಪ್ರದೇಶಕ್ಕೆ ಪೂರ್ಣ ರಾಜ್ಯದ ಸ್ಥಾನಮಾನ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು ಪ್ರಧಾನಿ ಇಂದಿರಾ ಗಾಂಧಿ ಅವರು ಇಂದು ಲೋಕಸಭೆಗೆ ತಿಳಿಸಿದರು.
ಹಿಮಾಚಲ ಪ್ರದೇಶಕ್ಕೆ ರಾಜ್ಯದ ಸ್ಥಾನಮಾನ ನೀಡುವ ಬಗ್ಗೆ ಮಸೂದೆಯನ್ನು ಆದಷ್ಟು ಶೀಘ್ರವೇ ಸಂಸತ್ತಿನಲ್ಲಿ ಮಂಡಿಸಲಾಗುವುದೆಂದೂ ಅವರು ನುಡಿದರು.
ಈ ಪ್ರಕಟಣೆ ಬಗ್ಗೆ ಹಿಮಾಚಲ ಪ್ರದೇಶದ ಸದಸ್ಯರು ಹರ್ಷೋದ್ಗಾರ ಮಾಡಿದರೆ ‘ಮಣಿಪುರದ ಗತಿ ಏನು’ ಎಂದು ಸಭೆಯ ಗುಂಪೊಂದು ಕೂಗಿ ಕೇಳಿತು.
ಕಾಲೇಜು, ತಾಂತ್ರಿಕ ಶಿಕ್ಷಣ ಇಲಾಖೆ ಶಿಕ್ಷಕರ ನಿವೃತ್ತಿ ವಯಸ್ಸು 58
ಬೆಂಗಳೂರು ಜುಲೈ 31– ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಗಳ ಶಿಕ್ಷಕರ ನಿವೃತ್ತಿ ವಯಸ್ಸನ್ನು 55 ವರ್ಷದಿಂದ 58 ವರ್ಷಕ್ಕೆ ಹೆಚ್ಚಿಸಲಾಗಿದೆ.
ಈ ಆಜ್ಞೆಯನ್ನು 1970ರ ಜುಲೈ 10ರಂದು ಹೊರಡಿಸಲಾಗಿದ್ದು, ಅಂದಿನಿಂದೀಚೆಗೆ ನಿವೃತ್ತರಾಗುವವರಿಗೆ ಅನ್ವಯಿಸುತ್ತದೆ.
ಶಿಕ್ಷಕರಲ್ಲದ ಬೇರೆ ಹುದ್ದೆಗಳಿಗೆ ಬಡ್ತಿಯನ್ನು ಒಪ್ಪಿಕೊಂಡ ಕೂಡಲೇ ಇದು ಅನ್ವಯವಾಗುವುದು ನಿಂತುಹೋಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.