ADVERTISEMENT

ಶುಕ್ರವಾರ, 31–10–1969

ಶುಕ್ರವಾರ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2019, 19:46 IST
Last Updated 30 ಅಕ್ಟೋಬರ್ 2019, 19:46 IST

ಕಾಂಗ್ರೆಸ್ಸಿಂದ ಇಂದಿರಾ, ಚವಾಣ್, ಆಲಿ, ರಾಂ ‘ಉಚ್ಚಾಟನೆ’ಗೆ ನಿರ್ಧಾರ

ನವದೆಹಲಿ, ಅ. 30– ಪ್ರಧಾನ ಮಂತ್ರಿ ಶ್ರೀಮತಿ ಇಂದಿರಾ ಗಾಂಧಿ ಸಂಪುಟದ ಮೂವರು ಹಿರಿಯ ಸಚಿವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ತೆಗೆದುಹಾಕುವ ಪ್ರಯತ್ನದ ಬಗ್ಗೆ ಸಿಂಡಿಕೇಟ್ ನಾಯಕರು ನಿರ್ಧರಿಸಿದ್ದಾರೆಂದು ಪ್ರಧಾನಿಯ ಬೆಂಬಲಿಗರು ಇಂದು ರಾತ್ರಿ ಇಲ್ಲಿ ತಿಳಿಸಿದರು.

ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಮಹತ್ವದ ಸಭೆ ಸೇರಲು ಇನ್ನು ಕೇವಲ 48 ಗಂಟೆ ಉಳಿದಿರುವಂತೆ ಇಂದು ರಾತ್ರಿ ಸ್ಫೋಟಗೊಂಡ ಈ ಸುದ್ದಿಯನ್ನು ಕಾಂಗ್ರೆಸ್ಸಿನ ಪ್ರಧಾನ ಕಾರ್ಯದರ್ಶಿ ಸಾದಿಕ್ ಆಲಿ ನಿರಾಕರಿಸಿದರು. ಶ್ರೀಮತಿ ಇಂದಿರಾ ಗಾಂಧಿ, ಕೇಂದ್ರ ಗೃಹ ಸಚಿವ ವೈ.ಬಿ. ಚವಾಣ್, ಕೃಷಿ ಮತ್ತು ಆಹಾರ ಸಚಿವ ಜಗಜೀವನರಾಂ ಮತ್ತು ಕೈಗಾರಿಕೆ ಅಭಿವೃದ್ಧಿ ಖಾತೆ ಸಚಿವ ಫಕ್ರುದ್ದೀನ್ ಆಲಿ ಅಹ್ಮದ್ ಅವರುಗಳನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವ
ದಿಂದ ಸಸ್ಪೆಂಡ್ ಮಾಡಲು ಸಿಂಡಿಕೇಟ್ ನಾಯಕರು ನಿರ್ಧರಿಸಿದ್ದಾರೆಂದು ಪ್ರಧಾನಿ ಬೆಂಬಲಿಗರ ಮೂಲದಿಂದ ಬಂದಿರುವ ಸುದ್ದಿ ತಿಳಿಸಿದೆ.

ADVERTISEMENT

ನಂದಾದೀಪ, ಇಲ್ಲವೇ ದಂಗೆ

ಬೆಂಗಳೂರು, ಅ. 30– ‘ಆಡಳಿತಗಾರರಿಗೆ ಕೃತಜ್ಞತೆಯ ಸೂಚಕವಾಗಿ ದೇಶದ ಜನ ತಮ್ಮ ಮನೆಯಲ್ಲಿ ನಂದಾದೀ‍ಪ ಬೆಳಗಲು ಸಿದ್ಧರಿದ್ದಾರೆ’.

‌ಆಡಳಿತಗಾರರು ಮಾಡಬೇಕಿರುವುದು ಇಷ್ಟೆ. ಲಂಚಕೋರತನದ ವ್ರಣವನ್ನು ತೆಗೆದು ಹಾಕುವುದು.

ಲಂಚವಿಲ್ಲದೆ ಕಾಗದಗಳು ಒಂದು ಮೇಜಿನಿಂದ ಮತ್ತೊಂದು ಮೇಜಿಗೆ ಹೋಗುವುದೇ ಇಲ್ಲವೆಂದು ಇಂದು ಕಾಫಿ ತೋಟಗಳ ಮಾಲೀಕರ ಸಮ್ಮೇಳನ
ದಲ್ಲಿ ತಿಳಿಸಿದ ಶ್ರೀ ಕುಶಾಲಪ್ಪನವರು ‘ಅಸಮಾಧಾನಗೊಂಡ ಜನ ದಂಗೆ ಎದ್ದಾರು’ ಎಂದು ಎಚ್ಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.