ADVERTISEMENT

50 ವರ್ಷಗಳ ಹಿಂದೆ: ಸರ್ಕಾರದ ಮಧ್ಯಪ್ರವೇಶ; ಹುಬ್ಬಳ್ಳಿ ಕಾರ್ಪೊರೇಟರ್‌ಗಳ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2022, 19:30 IST
Last Updated 20 ನವೆಂಬರ್ 2022, 19:30 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

l→ಯಕ್ಷಗಾನ ಕಲಾವಿದ ಕುರಿಯ ವಿಠ್ಠಲಶಾಸ್ತ್ರಿ ಇನ್ನಿಲ್ಲ

ಮಂಗಳೂರು, ನವೆಂಬರ್‌ 20– ಮೂರು ದಶಕಗಳಿಗೂ ಹೆಚ್ಚು ಕಾಲ ಯಕ್ಷಗಾನ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ದಕ್ಷಿಣ ಕನ್ನಡದ ಹಿರಿಯ ಯಕ್ಷಗಾನ ಕಲಾವಿದ ಕುರಿಯ ವಿಠ್ಠಲಶಾಸ್ತ್ರಿ ಅವರು ನಿನ್ನೆ ರಾತ್ರಿ ವಿಟ್ಲ ಬಳಿಯ ಕುರಿಯ ಗ್ರಾಮದಲ್ಲಿನ ಸ್ವಗೃಹದಲ್ಲಿ ನಿಧನರಾದರು.

ತೆಂಕುತಿಟ್ಟು ಯಕ್ಷಗಾನ ಕಲೆಗೆ ಖ್ಯಾತನಾಮರಾಗಿದ್ದ ಶಾಸ್ತ್ರಿಗಳಿಗೆ 60 ವರ್ಷ ವಯಸ್ಸಾಗಿತ್ತು. ಅವರು ಸಾಂಪ್ರದಾಯಿಕ ಯಕ್ಷಗಾನ ಕಲೆಯಲ್ಲಿ ಯಶಸ್ವೀ ಪ್ರಯೋಗಗಳನ್ನು ಮಾಡಿ ದಕ್ಷಿಣ ಕನ್ನಡದಲ್ಲಿ ಮನೆ ಮಾತಾಗಿದ್ದರು.‌

ADVERTISEMENT

ಧರ್ಮಸ್ಥಳ ಯಕ್ಷಗಾನ ಮಂಡಳಿ ಖ್ಯಾತಿಗೆ ಕಾರಣವಾಗಿದ್ದ ಶಾಸ್ತ್ರಿಗಳು ಯಾವುದೇ ಪಾತ್ರವನ್ನು ಸರಾಗವಾಗಿ ನಿರ್ವಹಿಸುತ್ತಿದ್ದರು.

l→ಬೀದಿ ದೀಪ: ಸರ್ಕಾರದ ಮಧ್ಯಪ್ರವೇಶ ಬಗ್ಗೆ ಹುಬ್ಬಳ್ಳಿ ಕಾರ್ಪೊರೇಟರ್‌ಗಳ ಆಕ್ರೋಶ

ಹುಬ್ಬಳ್ಳಿ, ನವೆಂಬರ್‌ 20– ಇಂದು ಸಂಜೆ ಇಲ್ಲಿ ಸೇರಿದ್ದ ಹುಬ್ಬಳ್ಳಿ–ಧಾರವಾಡ ಕಾರ್ಪೊರೇಷನ್‌ ಸಭೆಯಲ್ಲಿ, ಕಾರ್ಪೊರೇಷನ್ನಿನ ಮಾಮೂಲು ಕಾರ್ಯನಿರ್ವಹಣೆಯಲ್ಲಿ ರಾಜ್ಯ ಸರ್ಕಾರದ ಹಸ್ತಕ್ಷೇಪವಾಗಿದೆ ಎಂಬುದರ ಬಗೆಗಿನ ಚರ್ಚೆ ಕೋಲಾಹಲಕ್ಕೆ ಕಾರಣವಾಯಿತು.

ಕಾರ್ಪೊರೇಷನ್‌ ಪ್ರದೇಶದಲ್ಲಿ ಬೀದಿಗಳಿಗೆ ಮರ್ಕ್ಯುರಿ ದೀಪಗಳನ್ನು ಒದ ಗಿಸುವ ಬಗ್ಗೆ ಸ್ಥಾಯಿ ಸಮಿತಿ ಸರ್ವಾನು
ಮತದಿಂದ ಅಂಗೀಕರಿಸಿದ 25 ಲಕ್ಷ ರೂಪಾಯಿ ಯೋಜನೆ ಕಾರ್ಯಗತಕ್ಕೆ ರಾಜ್ಯ ಸರ್ಕಾರ ತಡೆ ಆಜ್ಞೆ ವಿಧಿಸಿರುವ ಔಚಿತ್ಯದ ಬಗ್ಗೆ ಸುಮಾರು 60 ನಿಮಿಷಗಳ ಕಾಲ ಬಿರುಸಿನ ಚರ್ಚೆ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.