ADVERTISEMENT

50 ವರ್ಷಗಳ ಹಿಂದೆ: 28ರಂದು ಲಾಹೋರಿನಲ್ಲಿ ಟಿಕ್ಕಾ

ಭಾನುವಾರ, 26–11–1972

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2022, 19:31 IST
Last Updated 25 ನವೆಂಬರ್ 2022, 19:31 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಗಡಿ: 28ರಂದು ಲಾಹೋರಿನಲ್ಲಿ ಟಿಕ್ಕಾ, ಮಾಣೆಕ್‌ ಷಾ ಚರ್ಚೆ

ನವದೆಹಲಿ, ನ. 25– ಜಮ್ಮು– ಕಾಶ್ಮೀರದಲ್ಲಿ ಹತೋಟಿ ರೇಖೆ ಗುರುತಿಸುವುದನ್ನು ಆಖೈರಾಗಿ ನಿರ್ಧರಿಸಲು ಮಂಗಳವಾರ (ನವೆಂಬರ್‌ 28) ಬೆಳಿಗ್ಗೆ 11 ಗಂಟೆಗೆ ಲಾಹೋರಿನಲ್ಲಿ ಭೇಟಿಯಾಗುವಂತೆ ಪಾಕಿಸ್ತಾನ ಸೈನ್ಯದ ದಂಡನಾಯಕ ಜನರಲ್‌ ಟಿಕ್ಕಾಖಾನ್‌ ಅವರು ಸೂಚಿಸಿರುವುದನ್ನು ಭಾರತದ ದಂಡನಾಯಕ ಜನರಲ್‌ ಮಾಣೆಕ್‌ ಷಾ ಅವರು ಒಪ್ಪಿದ್ದಾರೆ.

ಮಾಣೆಕ್‌ ಷಾ ಅವರನ್ನು ಮಾತುಕತೆಗಾಗಿ ಲಾಹೋರಿಗೆ ಆಹ್ವಾನಿಸಿದ ಟಿಕ್ಕಾಖಾನ್‌ ಅವರ ಪತ್ರವು ಭಾರತದ ಸೇನಾ ದಳಪತಿಗೆ ಇಂದು ತಲುಪಿತು ಎಂದು ರಕ್ಷಣಾ ಖಾತೆ ಪ್ರಕಟಣೆ ಸಂಜೆ ತಿಳಿಸಿದೆ.

ADVERTISEMENT

ವಿದೇಶಿ ಪ್ರವಾಸಿಗರನ್ನು ಹೆಚ್ಚು ಆಕರ್ಷಿಸಲು ಕೇಂದ್ರದ ಸರ್ವಯತ್ನ: ಡಾ. ಸರೋಜಿನಿ ಮಹಿಷಿ

ಹುಬ್ಬಳ್ಳಿ, ನ. 25– ರಾಷ್ಟ್ರದ ವಿದೇಶಿ ವಿನಿಮಯ ಗಳಿಕೆ ಹೆಚ್ಚಿಸಲು ವಿದೇಶಗಳಿಂದ ಹೆಚ್ಚು ಹೆಚ್ಚು ಮಂದಿ ಪ್ರವಾಸಿಗರನ್ನು ಆಕರ್ಷಿಸುವುದಕ್ಕಾಗಿ ಕೇಂದ್ರ ಸರ್ಕಾರ ಸರ್ವ ಪ್ರಯತ್ನ ನಡೆಸುತ್ತಿರುವುದಾಗಿ ಪ್ರವಾಸೋದ್ಯಮ ಹಾಗೂ ನಾಗರಿಕ ವಿಮಾನಯಾನ ಖಾತೆ ಸಚಿವೆ ಡಾ. ಸರೋಜಿನಿ ಮಹಿಷಿ ಅವರು ಇಂದು ಇಲ್ಲಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.