ADVERTISEMENT

50 ವರ್ಷಗಳ ಹಿಂದೆ: ಸೋಮವಾರ, 1–3– 1971

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2021, 19:30 IST
Last Updated 28 ಫೆಬ್ರುವರಿ 2021, 19:30 IST
   

7 ರಾಜ್ಯಗಳ 101 ಕ್ಷೇತ್ರಗಳಲ್ಲಿ ಇಂದು ಮತದಾನ ಆರಂಭ

ನವದೆಹಲಿ, ಫೆ. 28– ನಿಗದಿಯಾದ ಕಾಲಕ್ಕಿಂತ ಒಂದು ವರ್ಷ ಮೊದಲೇ ನಡೆಯುವಂತೆ ಆಜ್ಞೆ ಮಾಡಿರುವ ಲೋಕಸಭೆಯ ಐದನೇ ಸಾರ್ವತ್ರಿಕ ಚುನಾವಣೆಯ ಮೊದಲ ಹಂತದ ಮತದಾನ ರಾಷ್ಟ್ರದ ಏಳು ರಾಜ್ಯಗಳ ಹಲವು ಭಾಗಗಳಲ್ಲಿ ನಾಳೆ ಆರಂಭವಾಗಲಿವೆ.

ಅಸ್ಸಾಂ, ಬಿಹಾರ, ಗುಜರಾತ್‌, ಮಧ್ಯಪ್ರದೇಶ, ಮಹಾರಾಷ್ಟ್ರ, ತಮಿಳುನಾಡು, ಉತ್ತರ ಪ್ರದೇಶ, ಅಂಡಮಾನ್‌ ಮತ್ತು ನಿಕೋಬಾರ್‌ನಲ್ಲಿ ನಾಳೆ ಮತದಾನ ಸಂಪೂರ್ಣವಾಗಿ ಮುಕ್ತಾಯವಾಗಲಿದೆ.

ADVERTISEMENT

ವಿದ್ಯಾರ್ಥಿನಿಲಯದಲ್ಲಿ ಭಾರಿ ಶಸ್ತ್ರಾಸ್ತ್ರ ಸಂಗ್ರಹ

ಕಲ್ಕತ್ತ, ಫೆ.28– ದಕ್ಷಿಣ ಕಲ್ಕತ್ತದ ಜಾದವಪುರ ವಿಶ್ವವಿದ್ಯಾನಿಲಯದ ವಿದ್ಯಾರ್ಥಿನಿಲಯದಲ್ಲಿ ‘ಶಸ್ತ್ರಾಸ್ತ್ರ ಸಂಗ್ರಹ’ ವಿರುವುದನ್ನು ಇಂದು ಪೊಲೀಸರು ಪತ್ತೆ ಹಚ್ಚಿದರು.

ನಕ್ಸಲಿಯರೆಂದು ಶಂಕಿಸಲಾದ ವಿದ್ಯಾರ್ಥಿನಿಲಯದವರು ಹಾಗೂ ಪೊಲೀಸರ ನಡುವೆ ಗುಂಡಿನ ವಿನಿಮಯ ನಡೆಯಿತು. ಗುಂಡಿನ ದಾಳಿಯಲ್ಲಿ 7 ಮಂದಿ ಪೊಲೀಸ್‌ ಅಧಿಕಾರಿಗಳು ಹಾಗೂ ಇತರರು ಗಾಯಗೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.