ADVERTISEMENT

50 ವರ್ಷಗಳ ಹಿಂದೆ: ಗುರುವಾರ, 6-5-1971

​ಪ್ರಜಾವಾಣಿ ವಾರ್ತೆ
Published 5 ಮೇ 2021, 19:30 IST
Last Updated 5 ಮೇ 2021, 19:30 IST
   

ಪ್ಲಾಂಟೇಷನ್‌ ಜಮೀನು ಸಹಕಾರಿ ಸಂಸ್ಥೆಗಳಿಗೆ ವಹಿಸಿಕೊಡಲು ಆದೇಶ

ಮಂಗಳವಾರ, ಮೇ 5– ‘ರಾಜ್ಯದಲ್ಲಿ ಇನ್ನು ಮುಂದೆ ಕಾಫಿ, ರಬ್ಬರ್‌ ಮುಂತಾದ ಪ್ಲಾಂಟೇಷನ್‌ ಬೆಳೆಗಳಿಗೆ ಜಮೀನನ್ನು ಖಾಸಗಿ ಬಂಡವಾಳಗಾರರಿಗೆ ಕೊಡುವ ಬದಲು ಬಹುಜನರ ಸ್ವಾಮ್ಯವಿರುವ ಸಹಕಾರಿ ಸಂಸ್ಥೆಗಳಿಗೆ ವಹಿಸಿಕೊಡುವ ಬಗ್ಗೆ ಪರಿಶೀಲಿಸಬೇಕು’ ಎಂದು ರಾಜ್ಯಪಾಲ ಶ್ರೀ ಧರ್ಮವೀರ ಅವರು ಅರಣ್ಯ ಇಲಾಖೆಗೆ ಆದೇಶ ನೀಡಿದ್ದಾರೆ.

‘ದೊಡ್ಡ ಅರಣ್ಯ ಜಮೀನುಗಳನ್ನು ಸಿರಿವಂತ ತೋಟಗಾರರಿಗೆ ವಹಿಸಿಕೊಡುವ ಈಗಿನ ಕ್ರಮವನ್ನು ನಾನು ಒಪ್ಪುವುದಿಲ್ಲ. ಬಡ ಕಾರ್ಮಿಕರು ಬಡವರಾಗಿಯೇ ಉಳಿಯುವ ಪರಿಸ್ಥಿತಿ ಮುಂದುವರಿಯಬಾರದು’ ಎಂದು ಅವರು ಹೇಳಿದರು.

ADVERTISEMENT

ವಿದ್ಯುತ್‌ ದರ: ಯುನಿಟ್‌ಗೆ 12 ಪೈಸೆ

ಬೆಂಗಳೂರು, ಮೇ 5– ರಾಜ್ಯದಲ್ಲಿನ ವಿದ್ಯುಚ್ಛಕ್ತಿ ಸುಂಕ ತೆರಿಗೆ ಸೇರಿ ಯುನಿಟ್‌ ಒಂದಕ್ಕೆ 12 ಪೈಸೆಯಾಗಿದ್ದು,
ಕೆಲವು ಪತ್ರಿಕೆಗಳಲ್ಲಿ 16 ಪೈಸೆ ಎಂದು ವರದಿಯಾಗಿರುವುದು ಸರಿಯಲ್ಲ ಎಂದು ರಾಜ್ಯ ವಿದ್ಯುಚ್ಛಕ್ತಿ ಮಂಡಳಿಯ ಅಧ್ಯಕ್ಷರು ಇಂದು ಸ್ಪಷ್ಟೀಕರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.