ನಕ್ಸಲೀಯರ ಮೇಲೆ ಗೋಲಿಬಾರ್: ಇಬ್ಬರ ಮರಣ
ಕಲ್ಕತ್ತ, ಅ. 22– ಇಲ್ಲಿ ಸಾರ್ವಜನಿಕ ವಾಹನಗಳನ್ನು ಸುಟ್ಟು ಪೊಲೀಸರ ಮೇಲೆ ಬಾಂಬ್‌ಗಳನ್ನೆಸೆಯುತ್ತಿದ್ದ ನಕ್ಸಲೀಯರನ್ನು ಹಿಮ್ಮೆಟ್ಟಿಸಲು ಪೊಲೀಸರು ಇಂದು ಗೋಲಿಬಾರ್ ಮಾಡಿದಾಗ, ಇಬ್ಬರು ಸತ್ತು, ಸುಮಾರು 60 ಜನ ಗಾಯಗೊಂಡರು.
ಕೆಲವು ದಿವಸಗಳ ಹಿಂದೆ ಬಂಧಿತರಾಗಿದ್ದ ನಕ್ಸಲೀಯ ನಾಯಕ ಶ್ರೀ ಸಮೀರ್ ನಹಾ ಅವರು ನ್ಯುಮೋನಿಯಾದಿಂದ ಸತ್ತ ನಂತರ ಆವೇಶದಿಂದ ವರ್ತಿಸುತ್ತಿದ್ದ ನಕ್ಸಲೀಯ ತಂಡಗಳನ್ನು ಚದುರಿಸಲು ಅಲ್ಲಿನ ಕೆಲವು ಪ್ರದೇಶಗಳಲ್ಲಿ ಗೋಲಿಬಾರ್ ನಡೆಯಿತು.
ಕಂಟ್ರಾಕ್ಟರುಗಳ ಬದಲು ಸರ್ಕಾರವೇ ನಿರ್ವಹಿಸಲಿ: ಮೇಲ್ಮನೆಯಲ್ಲಿ ಒತ್ತಾಯ
ಬೆಂಗಳೂರು, ಅ. 22– ಅಭಾವ ಪ್ರದೇಶಗಳಲ್ಲಿ ಕೈಗೊಳ್ಳುವ ಪರಿಹಾರ ಕಾಮಗಾರಿಗಳನ್ನು ಕಂಟ್ರಾಕ್ಟರುಗಳಿಗೆ ವಹಿಸದೆ ಲೋಕೋಪಯೋಗಿ ಇಲಾಖೆಯ ಮೂಲಕ ಕೈಗೊಳ್ಳಬೇಕೆಂದು ಇಂದು ವಿಧಾನಪರಿಷತ್ತಿನಲ್ಲಿ ಕೆಲವು ಮಂದಿ ಸದಸ್ಯರು ಸಲಹೆ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.