ADVERTISEMENT

50 ವರ್ಷಗಳ ಹಿಂದೆ | ಶುಕ್ರವಾರ, 14–8–1970

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2020, 1:26 IST
Last Updated 14 ಆಗಸ್ಟ್ 2020, 1:26 IST
   

ಸ್ಯಾಂಕಿ ರಸ್ತೆಯಲ್ಲಿ ಹೊಸ ಶಾಸಕರ ಭವನ
ಬೆಂಗಳೂರು, ಆ. 13–
ಸ್ಯಾಂಕಿ ರಸ್ತೆಯಲ್ಲಿ ಸರ್ಕಾರ ಕೊಂಡಿರುವ ಮಾಣಿಕ್ಯವೇಲು ಬಂಗಲೆಯ 9 ಎಕರೆ ಆವರಣದ ಒಂದು ಭಾಗದಲ್ಲಿ 250 ‘ಕೊಠಡಿಗಳ’ ಶಾಸಕರ ಭವನವನ್ನು ನಿರ್ಮಿಸಲಾಗುವುದು.

ಪ್ರತೀ ಶಾಸಕನಿಗೆ ಎಂಟು ಚದರದ ವಸತಿಯನ್ನು ನಿರ್ಮಿಸಲಾಗುವುದು, ಇದರಲ್ಲಿ ಅಡುಗೆ ಮನೆಯೂ ಸೇರಿರುತ್ತದೆ.

ಶಾಸಕರ ಭವನ ನಿರ್ಮಾಣವನ್ನು ಹೌಸಿಂಗ್‌ ಬೋರ್ಡ್‌ಗೆ ಒಪ್ಪಿಸಲಾಗಿದೆ. ಈ ವರ್ಷದ ಡಿಸೆಂಬರ್‌ ವೇಳೆಗೆ ಕಾರ್ಯಾರಂಭವಾಗುವ ನಿರೀಕ್ಷೆ ಇದೆ.

ADVERTISEMENT

ಸಂಪುಟ ಗಾತ್ರದ ಮೇಲೆ ಪರಿಮಿತಿಗೆ ಶೀಘ್ರವೇ ಮಸೂದೆ
ನವದೆಹಲಿ, ಆ. 13–
ರಾಜ್ಯಗಳಲ್ಲಿ ಸಚಿವ ಸಂಖ್ಯೆಯನ್ನು ಮಿತಿಗೊಳಿಸಲು ಕೇಂದ್ರ ಸರ್ಕಾರವು ಮಸೂದೆಯನ್ನು ಸಿದ್ಧಪಡಿಸುತ್ತಿದೆ.

ಸಂಪುಟದ ಗಾತ್ರ ತಗ್ಗಿಸಬೇಕೆಂದು ಆಡಳಿತ ಸುಧಾರಣಾ ಆಯೋಗ ಮಾಡಿರುವ ಶಿಫಾರಸುಗಳನ್ನು ಕೇಂದ್ರ ಸಂಪುಟ ಈಗಾಗಲೇ ಮಾನ್ಯ ಮಾಡಿದೆ.

ಸಚಿವರ ಸಂಖ್ಯೆ ಮಿತಿಗೊಳಿಸಬೇಕೆಂಬ ತತ್ವಕ್ಕೆ ಸರ್ವ ಪಕ್ಷಗಳ ಸಮಿತಿಯೂ ಈಗಾಗಲೇ ತನ್ನ ಒಪ್ಪಿಗೆ ಕೊಟ್ಟಿದೆ. ಈ ತತ್ವದಂತೆ ಪ್ರತೀ ಹತ್ತು ಮಂದಿ ವಿಧಾನಸಭಾ ಸದಸ್ಯರಿಗೆ ಬಬ್ಬರಿಗಿಂತ ಹೆಚ್ಚು ಸಚಿವರ ನೇಮಕಕ್ಕೆ ಅವಕಾಶವಿರುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.