ADVERTISEMENT

50 ವರ್ಷಗಳ ಹಿಂದೆ: ಗುರುವಾರ 07-10-1996

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2021, 14:41 IST
Last Updated 6 ಅಕ್ಟೋಬರ್ 2021, 14:41 IST
   

ಜಾತಿಯಂಥ ಸಂಕುಚಿತ ದೃಷ್ಟಿಯ ವಿರುದ್ಧ ಪ್ರಜ್ಞೆ ಎಬ್ಬಿಸುವುದೇ ಉದ್ದೇಶ

ಬೆಂಗಳೂರು, ಅ. 6– ಜಾತಿ ಮುಂತಾದ ಸಂಕುಚಿತ ದೃಷ್ಟಿಯ ವಿರುದ್ಧ ಜನತೆಯ ಪ್ರಜ್ಞೆಯನ್ನು ಎಬ್ಬಿಸುವ ಉದ್ದೇಶದಿಂದ ತಾವು ಬೆಂಗಳೂರು ವಿಶ್ವವಿದ್ಯಾಲಯ ವ್ಯವಹಾರಗಳ ಬಗ್ಗೆ ಬಿಚ್ಚು ಮನಸ್ಸಿನಿಂದ ಮಾತನಾಡಿದುದಾಗಿ ರಾಜ್ಯಪಾಲ
ಶ್ರೀ ಧರ್ಮವೀರ ಅವರು ಇಂದು ಇಲ್ಲಿ ವರದಿ ಗಾರರಿಗೆ ತಿಳಿಸಿದರು.

ಸಂಕುಚಿತ ದೃಷ್ಟಿಯಿದ್ದಲ್ಲಿ ‘ಪರಿಹಾರವೇ ಇಲ್ಲ’ವೆಂದು ಸ್ಪಷ್ಟಪಡಿಸಿದ ರಾಜ್ಯಪಾಲರು ನಿರ್ವಿಕಾರ ದೃಷ್ಟಿಯಿಂದ ವ್ಯವಹರಿಸಿದಲ್ಲಿ ಮಾತ್ರ ವಿಶ್ವವಿದ್ಯಾಲಯಗಳ ಸಮಸ್ಯೆಗಳ ಪರಿಹಾರ ಸಾಧ್ಯವಾಗುವುದೆಂದರು.

ADVERTISEMENT

‘ಇದಾಗದಿದ್ದರೆ ಬ್ರಾಹ್ಮಣರ ವಿಶ್ವವಿದ್ಯಾನಿಲಯ, ಲಿಂಗಾಯತರ ವಿಶ್ವವಿದ್ಯಾನಿಲಯ, ಜೈನರ ವಿಶ್ವವಿದ್ಯಾನಿಲಯ ಅಂತ ಇಟ್ಟುಕೊಳ್ಳ ಬಹುದು. ಎಲ್ಲರಿಗೂ ಒಂದೇ ವಿಶ್ವವಿದ್ಯಾನಿಲಯವಿದ್ದರೆ, ಎಲ್ಲವನ್ನೂ ನಿರ್ವಿಕಾರ ಮನೋಭಾವನೆಯಿಂದ ನೋಡುವುದಗತ್ಯ’ ಎಂದು ಒತ್ತಿ ಹೇಳಿದರು.

ತಪ್ಪಿತಸ್ಥ ಭ್ರಷ್ಟ ಅಧಿಕಾರಿಗಳಿಗೆ ಉಗ್ರ ಶಿಕ್ಷೆ ವಿಧಿಸಲು ಕರೆ

ಬೆಂಗಳೂರು, ಅ. 6– ಯಾವುದೇ ಪ್ರಕರಣ ದಲ್ಲಿ ಅಲ್ಪ ಸಂಶಯಕ್ಕೆ ಅವಕಾಶವಿದ್ದರೂ ಭ್ರಷ್ಟಾಚಾರದ ಆಪಾದನೆ ಇರುವ ಅಧಿಕಾರಿಗೆ ಅವರ ಸೌಲಭ್ಯ ನೀಡಬೇಕೆಂದೂ ತಪ್ಪು ಕಂಡುಬಂದಲ್ಲಿ ನಿರ್ದಾಕ್ಷಿಣ್ಯವಾಗಿ ತೀವ್ರ ರೀತಿಯ ಶಿಕ್ಷೆ ವಿಧಿಸಬೇಕೆಂದೂ ರಾಜ್ಯಪಾಲ ಶ್ರೀ ಧರ್ಮವೀರ ಅವರು ಇಂದು ಜಾಗೃತಾಧಿಕಾರಿಗಳಿಗೆ ಸಲಹೆ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.