ADVERTISEMENT

50 ವರ್ಷಗಳ ಹಿಂದೆ: ಮುಷ್ಕರ ಅಕ್ರಮ: ಸರ್ಕಾರಿ ನೌಕರರಿಗೆ ಅರಸು ಎಚ್ಚರಿಕೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 5 ಏಪ್ರಿಲ್ 2024, 23:33 IST
Last Updated 5 ಏಪ್ರಿಲ್ 2024, 23:33 IST
50 ವರ್ಷಗಳ ಹಿಂದೆ
50 ವರ್ಷಗಳ ಹಿಂದೆ   

ಮುಷ್ಕರ ಅಕ್ರಮ: ಸರ್ಕಾರಿ ನೌಕರರಿಗೆ ಅರಸು ಎಚ್ಚರಿಕೆ

ಬೆಂಗಳೂರು, ಏ. 5– ರಾಜ್ಯ ಸರ್ಕಾರಿ ನೌಕರರು ಅಖಿಲ ಭಾರತ ಕಾರ್ಯಕ್ರಮದಂತೆ ಏಪ್ರಿಲ್‌ 9ರಂದು ಮುಷ್ಕರ ಹೂಡುವುದು ಅಕ್ರಮವಾಗುವುದಲ್ಲದೇ ಶಿಸ್ತಿನ ಕ್ರಮಗಳನ್ನು ಎದುರಿಸಬೇಕಾಗುವುದೆಂದು ಮುಖ್ಯಮಂತ್ರಿ ಶ್ರೀ ಡಿ. ದೇವರಾಜ ಅರಸು ಅವರು ಇಂದು ವಿಧಾನಸಭೆಯಲ್ಲಿ ಎಚ್ಚರಿಕೆ ನೀಡಿದರು.

ಮುಷ್ಕರದ ಬಗ್ಗೆ ಶ್ರೀ ಕೋಣಂದೂರು ಲಿಂಗಪ್ಪ ಅವರು ಪ್ರಶ್ನೋತ್ತರವಾದ ನಂತರ ಮುಖ್ಯಮಂತ್ರಿಗಳ ಗಮನ ಸೆಳೆದರು.

ಆಹಾರ ಬೆಲೆಗಳನ್ನು ಇಳಿಸುವುದು, ವೇತನ ಭತ್ಯೆಗಳ ಪರಿಷ್ಕರಣೆ ಮುಂತಾದ ಬೇಡಿಕೆಗಳ ಬಗ್ಗೆ ಇಂದು ಸಂಜೆ ಸಭೆ ನಡೆಯುವುದು ತಮಗೆ ಗೊತ್ತಿದೆಯೆಂದು ಮುಖ್ಯಮಂತ್ರಿ ತಿಳಿಸಿ ‘ಸಭೆ, ಮುಷ್ಕರಗಳಿಂದ ಸಮಸ್ಯೆ ಪರಿಹಾರವಾಗುವುದಿಲ್ಲ’ ಎಂದರು.

ADVERTISEMENT

ನೌಕರರ ಬೇಡಿಕೆಗಳ ಬಗ್ಗೆ ಮಾನ್ಯ ಸದಸ್ಯರಷ್ಟೇ ಸರ್ಕಾರಕ್ಕೂ ಸಹಾನುಭೂತಿಯಿದೆ. ಆದರೆ, ಕೇಂದ್ರ ಸರ್ಕಾರ ಏಕಪಕ್ಷೀಯವಾಗಿ ನೌಕರರ ವೇತನ ಭತ್ಯೆಗಳನ್ನು ಪರಿಷ್ಕರಿಸುತ್ತಿರುವುದು ತಾರತಮ್ಯಕ್ಕೆ ಅವಕಾಶ
ಆಗಿದೆಯೆಂದು ಶ್ರೀ ಅರಸು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.