ADVERTISEMENT

50 ವರ್ಷಗಳ ಹಿಂದೆ | ಜನತಾ ವಿಧಾನಸಭೆಗೆ ಚುನಾವಣೆ ಪ್ರತಿಸರ್ಕಾರ ರಚನೆ: ಜೆ.ಪಿ. ಕರೆ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2024, 23:30 IST
Last Updated 10 ಅಕ್ಟೋಬರ್ 2024, 23:30 IST
50 ವರ್ಷಗಳ ಹಿಂದೆ
50 ವರ್ಷಗಳ ಹಿಂದೆ   

ಪಟನಾ, ಅ. 10– ಗೊತ್ತುಪಡಿಸುವ ‘ಗಡುವಿನೊಳಗೆ’ ಬಿಹಾರದ ಈಗಿನ ವಿಧಾನಸಭೆಯನ್ನು ವಿಸರ್ಜಿಸದಿದ್ದರೆ ಎಲ್ಲ 315 ಕ್ಷೇತ್ರಗಳಲ್ಲೂ ಚುನಾವಣೆ ನಡೆಸಿ ಪ್ರತಿಯಾದ ‘ಜನತಾ ವಿಧಾನಸಭೆ’ ರಚಿಸುವುದಾಗಿ ಸರ್ವೋದಯ ನಾಯಕ ಜಯಪ್ರಕಾಶ್ ನಾರಾಯಣ್‌ ಅವರು ಪ್ರಕಟಿಸಿದರು.

ಅಕ್ಟೋಬರ್ 5ರಂದು ಗೋಲಿಬಾರ್ ಮತ್ತು ಹಿಂಸಾಚಾರ ನಡೆದ ಸ್ಥಳವಾದ ಪಟನಾ ನಗರದಲ್ಲಿ ನಾರಾಯಣ್‌ ಸಾರ್ವಜನಿಕ ಸಭೆ ಯನ್ನುದ್ದೇಶಿಸಿ ಮಾತನಾಡಿ, ವಿದ್ಯಾರ್ಥಿ ಕ್ರಿಯಾ ಸಮಿತಿ ಹಾಗೂ ಚಳವಳಿ ಒಪ್ಪಿಕೊಂಡಿರುವ ರಾಜಕೀಯ ಪಕ್ಷಗಳ ಸಮನ್ವಯ ಸಮಿತಿಯ ಜೊತೆ ಸಮಾಲೋಚನೆ ನಡೆಸಿ ‘ಗಡುವನ್ನು’ ಪ್ರಕಟಿಸುವುದಾಗಿ ತಿಳಿಸಿದರು.

‘ಜನತಾ ವಿಧಾನಸಭೆಗೆ’ ಚುನಾವಣೆಗಳು ನಡೆದ ನಂತರ ಒಂದು ‘ಸಂಪುಟ’ ರಚಿಸಲಾಗುವುದು. ಈಗಿನ ವಿಧಾನಸಭೆಯ ವಿಸರ್ಜನೆಯಾಗಿ ಸಂವಿಧಾನದ ಪ್ರಕಾರ  ಹೊಸ ಚುನಾವಣೆ ನಡೆಯುವವರೆಗೆ ಈ ‘ವಿಧಾನಸಭೆ’ ಮತ್ತು ‘ಸಂಪುಟ’ ಕಾರ್ಯ ನಿರ್ವಹಿಸುತ್ತವೆ ಎಂದು ಅವರು ನುಡಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.