ಸಾಮಾನ್ಯ ವಿಮೆ ರಾಷ್ಟ್ರೀಕರಣ– ರಾಷ್ಟ್ರಪತಿ ಸುಗ್ರೀವಾಜ್ಞೆ: 106 ಸಂಸ್ಥೆಗಳ ಆಡಳಿತಕ್ಕೆ ಕಾರ್ಪೊರೇಷನ್
ನವದೆಹಲಿ, ಮೇ 13– ರಾಷ್ಟ್ರದ ಸಾಮಾನ್ಯ ವಿಮೆ ಉದ್ಯಮವನ್ನು ಕೇಂದ್ರ ಸರ್ಕಾರ ಇಂದು ರಾಷ್ಟ್ರೀಕರಿಸಿತು.
ಭಾರತದಲ್ಲಿ ಈಗ ಕಾರ್ಯನಿರತವಾಗಿರುವ ಸಾಮಾನ್ಯ ವಿಮೆ ಸಂಸ್ಥೆಗಳ ಆಡಳಿತವನ್ನು ತತ್‌ಕ್ಷಣದಿಂದ ಕೇಂದ್ರ ಸರ್ಕಾರ ವಹಿಸಿಕೊಂಡಿದೆ.
ಇದಕ್ಕೆ ಸಂಬಂಧಿಸಿದ ಸುಗ್ರೀವಾಜ್ಞೆಯೊಂದನ್ನು ರಾಷ್ಟ್ರಪತಿ ಇಂದು ಹೊರಡಿಸಿದರು. ಈ ಸುಗ್ರೀವಾಜ್ಞೆಯಿಂದ ರಾಷ್ಟ್ರದಲ್ಲಿನ ನಲವತ್ತೆರಡು ವಿದೇಶಿ ಸಾಮಾನ್ಯ ವಿಮೆ ಸಂಸ್ಥೆಗಳು ಹಾಗೂ ಅರವತ್ನಾಲ್ಕು ಭಾರತೀಯ ಸಾಮಾನ್ಯ ವಿಮೆ ಸಂಸ್ಥೆಗಳ ಆಡಳಿತವು ಸರ್ಕಾರದ ಹತೋಟಿಗೆ ಬಂದಿದೆ.
ಸಂಸ್ಥಾ ಕಾಂಗ್ರೆಸ್ ಹೊಸ ಅಧ್ಯಕ್ಷರ ಒಮ್ಮತದ ಆಯ್ಕೆ ಯತ್ನ ವಿಫಲ
ಮುಂಬೈ, ಮೇ 13– ಸಂಸ್ಥಾ ಕಾಂಗ್ರೆಸಿನ ಅಧ್ಯಕ್ಷ ಸ್ಥಾನಕ್ಕೆ ಅಭ್ಯರ್ಥಿಯ ಆಯ್ಕೆ ವಿಚಾರದಲ್ಲಿ ಕಾರ್ಯಕಾರಿ ಸಮಿತಿಯು ಇಂದು ಸರ್ವಸಮ್ಮತ ನಿರ್ಧಾರಕ್ಕೆ ಬರಲಾಗದೆ ಹೊಸ ಅಧ್ಯಕ್ಷರ ಚುನಾವಣೆಯ ವಿಷಯವನ್ನು ಎಐಸಿಸಿಗೇ ಬಿಡಲು ನಿರ್ಧರಿಸಿತು.
ಪಕ್ಷದ ಹೊಸ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರಗಳನ್ನು ಆಹ್ವಾನಿಸಲೂ ಕಾರ್ಯಕಾರಿ ಸಮಿತಿಯು ನಿರ್ಧರಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.