ADVERTISEMENT

50 ವರ್ಷಗಳ ಹಿಂದೆ: ಮಂಗಳವಾರ 06.7.1971

​ಪ್ರಜಾವಾಣಿ ವಾರ್ತೆ
Published 5 ಜುಲೈ 2021, 19:31 IST
Last Updated 5 ಜುಲೈ 2021, 19:31 IST
   

ಅರ್ಹ ಕೆಳದರ್ಜೆ ನೌಕರರು ಉನ್ನತ ದರ್ಜೆಗೆ ಏರಲು ತಕ್ಕ ಕಾರ್ಮಿಕ ನೀತಿಗೆ ಕೆಂಗಲ್ ಕರೆ
ಬೆಂಗಳೂರು, ಜುಲೈ 5–
ಯೋಗ್ಯತೆ, ನಿಸ್ಪೃಹತೆ ಮತ್ತು ಕೌಶಲ ಇರುವ ಕೆಳದರ್ಜೆಯ ನೌಕರ, ಸಂಸ್ಥೆಯ ಉನ್ನತ ದರ್ಜೆಗೆ ಏರುವುದಕ್ಕೆ ಅವಕಾಶವಿರುವ ಕಾರ್ಮಿಕ ನೀತಿ ಅನುಸರಣೆ ಅಗತ್ಯವೆಂದು ಕೇಂದ್ರ ರೈಲ್ವೆ ಸಚಿವ ಶ್ರೀ ಕೆ.ಹನುಮಂತಯ್ಯ ಅವರು ಇಂದು ಇಲ್ಲಿ ನುಡಿದರು.

ರೈಲ್ವೆ ಇನ್‌ಸ್ಟಿಟ್ಯೂಟ್‌ನಲ್ಲಿ ಮೈಸೂರು ವಿಭಾಗದ ರೈಲ್ವೆ ನೌಕರರ ಸಮ್ಮೇಳನವನ್ನು ಉದ್ಘಾಟಿಸಿದ ಅವರು, ಇಂತಹ ಕ್ರಾಂತಿಕಾರಿ ನೀತಿಯ ಬಗ್ಗೆ ಪ್ರಧಾನ ಮಂತ್ರಿಯವರು ಯೋಚಿಸಿರುವರೆಂದು ಹೇಳಿ, ಆಡಳಿತ ವರ್ಗ ಮತ್ತು ಕಾರ್ಮಿಕರ ದರ್ಜೆಗಳ ವರ್ಗೀಕರಣ ಸಲ್ಲದೆಂದೂ ಅದು ಕೇವಲ ಬ್ರಿಟಿಷರ ಪದ್ಧತಿಯಾಗಿತ್ತೆಂದೂ ವಿವರಿಸಿದರು.

ಆತುರದ ನಿರ್ಧಾರ ಅನುಚಿತ ಎಂದು ಪ್ರಧಾನಿ ಇಂದಿರಾ
ನವದೆಹಲಿ, ಜುಲೈ 5– ಬಾಂಗ್ಲಾ ದೇಶಕ್ಕೆ ಮಾನ್ಯತೆ ನೀಡುವ ಬಗ್ಗೆ ಪೂರ್ಣವಾಗಿ ನಂಬಿಕೆ ಮೂಡುವವರೆಗೆ, ಸರ್ಕಾರವು ಒತ್ತಾಯಕ್ಕೆ ಮಣಿದು ಆತುರದ ನಿರ್ಧಾರ ಕೈಗೊಳ್ಳುವುದು ಅನುಚಿತವಾಗುತ್ತದೆ ಎಂದು ಪ್ರಧಾನಿ ಇಂದಿರಾ ಗಾಂಧಿ ಅವರು ಇಂದು ಆಡಳಿತ ಕಾಂಗ್ರೆಸ್ ಸಂಸದೀಯ ಪಕ್ಷದ ಕಾರ್ಯನಿರ್ವಾಹಕ ಸಮಿತಿಗೆ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.