ADVERTISEMENT

50 ವರ್ಷಗಳ ಹಿಂದೆ: ಶನಿವಾರ 10.7.1971

​ಪ್ರಜಾವಾಣಿ ವಾರ್ತೆ
Published 9 ಜುಲೈ 2021, 19:30 IST
Last Updated 9 ಜುಲೈ 2021, 19:30 IST
   

ಕೀರ್ತಿರಾಯ ಕುಲದೀಪಕನಿಗೆ ಅಭಿಮಾನಿಗಳಿಂದ ಅಂತಿಮ ಪ್ರಣಾಮ
ಬೆಂಗಳೂರು, ಜುಲೈ 9–
ಗೋವಿಂದ–ನಾರಾಯಣ–ಕೃಷ್ಣರ ನಾಮಸ್ಮರಣೆಯಲ್ಲಿ ಪೊಲೀಸ್ ಬ್ಯಾಂಡಿನ ಶೋಕಗೀತೆ ದುಃಖದಿಂದ ಬೆರೆಯುತ್ತಿತ್ತು. ನೆರೆದಿದ್ದವರ ಹೃದಯ ಮೀಟುತ್ತಿತ್ತು. ಕನ್ನಡ ನಾಡಿನ ಜನಮನವನ್ನಾಳಿದ ಮನೆಮನೆಯ, ಕಾದಂಬರಿ ಸಾರ್ವಭೌಮ ಅ.ನ.ಕೃ. ಅವರ ಪಾರ್ಥಿವ ಶರೀರವನ್ನು ವಿಲ್ಸನ್ ಗಾರ್ಡನ್ಸ್‌ನಲ್ಲಿರುವ ವಿದ್ಯುತ್ ಸ್ಮಶಾನದಲ್ಲಿ ದಹಿಸಲಾಯಿತು.

ಅ.ನ.ಕೃ. ನಿಧನಕ್ಕೆ ರಾಷ್ಟ್ರಕವಿ ಕುವೆಂಪು, ಸಾಹಿತಿ ಡಾ.ಡಿ.ವಿ. ಗುಂಡಪ್ಪ, ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಬಿ. ಶಿವಮೂರ್ತಿ ಶಾಸ್ತ್ರಿ, ವಿಮರ್ಶಕ ವಿ. ಸೀತಾರಾಮಯ್ಯ, ರಾಜ್ಯಪಾಲ ಶ್ರೀ ಧರ್ಮವೀರ, ಗಣ್ಯರಾದ ಪು.ತಿ.ನ, ಜಿ.ಪಿ. ರಾಜರತ್ನಂ, ತಿ.ತಾ. ಶರ್ಮ, ಬಿ. ಪುಟ್ಟಸ್ವಾಮಯ್ಯ, ಕೆ.ಎಸ್‌. ನರಸಿಂಹಸ್ವಾಮಿ, ಜಿ. ವೆಂಕಟಸುಬ್ಬಯ್ಯ, ಜಿ. ನಾರಾಯಣ, ಕಡಿದಾಳ್ ಮಂಜಪ್ಪ, ಮತ್ತಿತರರು ಸಂತಾಪ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT