ADVERTISEMENT

50 ವರ್ಷಗಳ ಹಿಂದೆ: ಬುಧವಾರ, ಜೂನ್ 8, 1972

​ಪ್ರಜಾವಾಣಿ ವಾರ್ತೆ
Published 7 ಜೂನ್ 2022, 19:30 IST
Last Updated 7 ಜೂನ್ 2022, 19:30 IST
   

29ನೇ ಸಂವಿಧಾನ ತಿದ್ದುಪಡಿ ಮಸೂದೆ ವಾಪಸ್‌: ಕೇಂದ್ರ ನಿರ್ಧಾರ
ನವದೆಹಲಿ, ಜೂನ್‌ 7–
ಈ ವರ್ಷದ ಆದಿಯಲ್ಲಿ ಸಂಸತ್ತಿನಲ್ಲಿ ಮಂಡಿಸಲಾದ 29ನೇ ಸಂವಿಧಾನ ತಿದ್ದುಪಡಿ ಮಸೂದೆ ಹಿಂತೆಗೆದುಕೊಳ್ಳಲು ಕೇಂದ್ರ ಸಚಿವ ಸಂಪುಟದ ಸಭೆ ಇಂದು ನಿರ್ಧರಿಸಿದೆ.

ಹಿಂದಿನ ಶಾಸನಗಳಲ್ಲಿನ ಭೂ ಹಿಡುವಳಿ ಮೇಲಿನ ಮಿತಿಯನ್ನು ಮತ್ತಷ್ಟು ತಗ್ಗಿಸುವುದಕ್ಕೆ ಸಂಬಂಧಿಸಿದ ಭೂ–ಶಾಸನಗಳಿಗೆ ರಕ್ಷಣೆ ನೀಡುವುದೇ ಈ ತಿದ್ದುಪಡಿ ಮಸೂದೆ ಉದ್ದೇಶವಾಗಿತ್ತು.

ಜಮೀನು ವಶಪಡಿಸಿಕೊಳ್ಳಲಾದ ಮಾಲಿಕರಿಗೆ ಪರಿಹಾರ ನೀಡುವ ಪ್ರಶ್ನೆ ಸಮಯದಲ್ಲಿ ಕಾನೂನು ತಜ್ಞರಲ್ಲಿ ಭಿನ್ನಾಭಿಪ್ರಾಯ ಉಂಟಾಗಿದೆ.

ADVERTISEMENT

ಆಡಳಿತ ಸುಧಾರಣೆಗೆ ರಾಜ್ಯಪಾಲರ ಸೂಚನೆ
ಬೆಂಗಳೂರು, ಜೂನ್‌ 7–
ಬೆಂಗಳೂರು ವಿಶ್ವವಿದ್ಯಾಲಯದ ವ್ಯವಹಾರಗಳ ಬಗೆಗೆ ಸಾಮ್ಯುಯಲ್‌ ಮಥಾಯ್ ವರದಿಯನ್ನು ಸರ್ಕಾರವಿನ್ನು ಪರಿಶೀಲಿಸಬೇಕಾಗಿದ್ದರೂ ಕುಲಪತಿ ಶ್ರೀ ಮೋಹಲಾಲ್ ಸುಖಾಡಿಯಾ ಅವರ ಸೂಚನೆ ಪ್ರಕಾರ ವಿಶ್ವವಿದ್ಯಾಲಯದ ಆಡಳಿತದ ಸಂಬಂಧದಲ್ಲಿ ಅದರ ಕೆಲವು ನಿರ್ದಿಷ್ಟ ಶಿಫಾರಸುಗಳನ್ನು ಕಾರ್ಯಗತಗೊಳಿಸಲು ವಿಶ್ವವಿದ್ಯಾಲಯದ ಅಧಿಕಾರಿಗಳು ನಿರ್ಧರಿಸಿದ್ದಾರೆ. ತತ್‌ಕ್ಷಣ ಕ್ರಮ ಕೈಗೊಳ್ಳಬೇಕಾದ ನಿರ್ದಿಷ್ಟ ವಿಷಯಗಳನ್ನು, ವಿಶೇಷತಾ ಸಿಬ್ಬಂದಿ ವರ್ಗದ ಕೆಲವರ ವಿರುದ್ಧ ಶಿಸ್ತುಕ್ರಮ ಕುರಿತು, ಸುಖಾಡಿಯಾ ಅವರು ಪಟ್ಟಿ ಮಾಡಿ ವಿಶ್ವವಿದ್ಯಾಲಯಕ್ಕೆ ಬರೆದು ತಿಳಿಸಿದ್ದಾರೆಂದು ಗೊತ್ತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.