
ಪ್ರಜಾವಾಣಿ ವಾರ್ತೆ
ಚೀನಾದೊಡನೆಯೂ ಮೈತ್ರಿ ಒಪ್ಪಂದಕ್ಕೆ ಭಾರತದ ಪ್ರಯತ್ನ
ಕೊಚ್ಚಿ, ಸೆ. 1– ರಷ್ಯಾದೊಡನೆ ಮಾಡಿಕೊಂಡಂಥ ಮೈತ್ರಿ ಒಪ್ಪಂದವನ್ನು ಚೀನಾದೊಡನೆಯೂ ಮಾಡಿಕೊಳ್ಳಲು ಭಾರತ ಖಚಿತ ಪ್ರಯತ್ನಗಳನ್ನು ನಡೆಸುತ್ತಿದೆ.
ಇಲ್ಲಿ ಇಂದು ಆಡಳಿತ ಕಾಂಗ್ರೆಸಿನ ಪ್ರಧಾನ ಕಾರ್ಯದರ್ಶಿ ಡಾ. ಹೆನ್ರಿ ಆಸ್ಟಿನ್‌ರವರು ಸೂಚನೆ ನೀಡಿದರಲ್ಲದೆ, ಕೇಂದ್ರ ಸರ್ಕಾರದಲ್ಲಿ ವಿದೇಶಾಂಗ ನೀತಿ ನಿರೂಪಣೆ ಸಮಿತಿಯ ಅಧ್ಯಕ್ಷರಾದ ಡಿ.ಸಿ.ಧಾರ್‌ರವರು ಪ್ರಯತ್ನಿಸುತ್ತಿ ದ್ದಾರೆಂದೂ ಹೇಳಿದರು.
ಕಾನೂನು ಆಯೋಗ ಪುನರ್ರಚನೆ
ನವದೆಹಲಿ, ಸೆ. 1– ಮಾಜಿ ಶ್ರೇಷ್ಠ ನ್ಯಾಯಾಧೀಶ ಪಿ.ಬಿ.ಗಜೇಂದ್ರ ಗಡ್ಕರ್ ಅವರ ಅಧ್ಯಕ್ಷತೆಯಲ್ಲಿ ಇಂದಿನಿಂದ ಪುನರ್ರಚಿತವಾಗಿರುವ ಕಾನೂನು ಆಯೋಗ ವಿಶಾಲ ಕಾರ್ಯವ್ಯಾಪ್ತಿ ಹೊಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.