ಆರ್ಥಿಕರಂಗ ಪುನಶ್ಚೇತನಕ್ಕೆ ಐದು ಅಂಶಗಳ ಸಮಗ್ರ ಯೋಜನೆ: ಕೇಂದ್ರದ ಸೂಚನೆ
ನವದೆಹಲಿ, ಡಿ. 22– ಅಪಾರವಾದ ನಿರಾಶ್ರಿತರ ವಲಸೆಮತ್ತು ಪಾಕಿಸ್ತಾನವು ಈಚೆಗೆ ನಡೆಸಿದ ಆಕ್ರಮಣಗಳಿಂದ ಅನೇಕ ಸಮಸ್ಯೆಗಳು ಎದುರಾಗಿ ಈಗಾಗಲೇ ಆರ್ಥಿಕರಂಗದ ಮೇಲೆ ಅಪಾರ ಒತ್ತಡ ಬಿದ್ದಿರುವುದರಿಂದ ಆರ್ಥಿಕರಂಗವನ್ನು ಪುನಶ್ಚೇತನಗೊಳಿಸಲು ಮತ್ತು ಪ್ರಗತಿಯ ವೇಗವು ಕಡಿಮೆಯಾಗುತ್ತಿರುವುದನ್ನು ತಡೆಯಲು ಐದು ಅಂಶಗಳ ಸಮಗ್ರ ಯೋಜನೆಯೊಂದನ್ನು ಯೋಜನಾ ಆಯೋಗ ಮತ್ತು ಸರ್ಕಾರವು ಇಂದು ಸೂಚಿಸಿತು.
ನಾಲ್ಕನೇ ಪಂಚವಾರ್ಷಿಕ ಯೋಜನೆಯ ಮಧ್ಯಂತರ ಸಮೀಕ್ಷೆಯ ಪತ್ರವನ್ನು ಯೋಜನಾ ಸಚಿವ ಶ್ರೀ ಸಿ.ಸುಬ್ರಹ್ಮಣ್ಯಂ ಇಂದು ಲೋಕಸಭೆಯಲ್ಲಿ ಮಂಡಿಸಿ, ಬೆಲೆಗಳ ಸ್ಥಿರತೆ, ಸ್ವಾಲಂಬನೆ ಸಾಧನೆ, ಉತ್ಪಾದನೆ ಏರಿಕೆ, ಮಿತವ್ಯಯ ಸಾಧನೆ ಮತ್ತು ಹೆಚ್ಚು ಉಳಿತಾಯ ಹಾಗೂ ಸಂಪನ್ಮೂಲಗಳನ್ನು ಶೇಖರಿಸಲು ಕರೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.