ಹೊರನಾಡ ಕನ್ನಡಿಗರ ಸ್ಥಿತಿ ‘ಪರಿತ್ಯಕ್ತ ಸ್ತ್ರೀಯಂತೆ’
ಬೆಂಗಳೂರು, ಡಿ. 30– ಗಡಿನಾಡ ಕನ್ನಡಿಗರ ಬವಣೆ ಮನ ಕರಗುವಂತಿದ್ದರೆ, ದೂರದ ಹೊರನಾಡ ಕನ್ನಡಿಗರದ್ದು ಬೇರೆ ರೀತಿಯ ಸಮಸ್ಯೆ. ಜಿಲ್ಲಾ ಪ್ರತಿನಿಧಿ ಗಳದ್ದು ಮತ್ತೊಂದು ಬಗೆ. ಕೆಲವರು ದುಃಖ ತೋಡಿಕೊಂಡರೆ ಮತ್ತೆ ಕೆಲವರು ಪರಿಷತ್ತಿನಿಂದ ತಾವು ನಿರೀಕ್ಷಿಸಿರುವ ಸಹಾಯಗಳ ಬಗ್ಗೆ ಸಲಹೆಗಳನ್ನಿತ್ತರು. ‘ಗಡಿಭಾಗದ ಜನರ ಪರಿಸ್ಥಿತಿ ಪರಿತ್ಯಕ್ತ ಸ್ತ್ರೀಯಂತಾಗಿದೆ’ ಎಂಬ ಅಭಿಪ್ರಾಯವೂ ವ್ಯಕ್ತವಾಯಿತು.
ಬೆಳ್ಳಾವೆ ವೆಂಕಟನಾರಣಪ್ಪ ಮಂಟಪದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ನಡೆದ ಹೊರನಾಡ ಕನ್ನಡಿಗರು ಮತ್ತು ಜಿಲ್ಲಾ ಪ್ರತಿನಿಧಿಗಳ ಸಭೆ ವಿವಿಧ ಮುಖದ ಸಮಸ್ಯೆಗಳನ್ನು ಬಿಂಬಿಸಿತು.
ಸಂಸತ್ ಪರಿಶೀಲನೆ ನಂತರ ಸರ್ಕಾರದ ಅಂತಿಮ ನಿರ್ಧಾರ
ದೆಹಲಿ, ಡಿ. 30– ಮೈಸೂರು– ಮಹಾ ರಾಷ್ಟ್ರ– ಕೇರಳ ಗಡಿ ಬಗ್ಗೆ ಮಹಾಜನ್ ವರದಿಯನ್ನು ಪಾರ್ಲಿಮೆಂಟ್ ಪರಿಶೀಲಿಸಿದ ನಂತರ ಕೇಂದ್ರ ಸರ್ಕಾರ ಅಂತಿಮ ನಿರ್ಧಾರ ಕೈಗೊಳ್ಳುತ್ತದೆಂದು ಪ್ರಧಾನ ಮಂತ್ರಿ ಶ್ರೀಮತಿ ಇಂದಿರಾ ಗಾಂಧಿಯವರು ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರ ನೀಡುತ್ತಾ ತಿಳಿಸಿದರು.
ಮಧ್ಯಂತರ ಚುನಾವಣೆಯ ಫಲಿತಾಂಶ ಸರ್ಕಾರದ ಅಂತಿಮ ನಿರ್ಧಾರದ ಮೇಲೆ ಯಾವ ಪ್ರಭಾವ ಬೀರುವುದಿಲ್ಲವೆಂದೂ ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.