ದಾಸವಾಳ: ಮನೋರೋಗಕ್ಕೆ ಒಳ್ಳೆಯ ಮದ್ದು
ಚಂಡೀಗಢ, ಮಾರ್ಚ್ 11– ದಾಸವಾಳ ಹೂವು ಮನೋ ರೋಗಗಳಿಗೆ ಉತ್ತಮ ಔಷಧಿ ಯೆಂದು ಪಾಟಿಯಾಲ ಸರ್ಕಾರಿ ಆಯುರ್ವೇದ ಕಾಲೇಜಿನ ಪ್ರಿನ್ಸಿಪಾಲ್ ಡಾ. ಅಮರನಾಥ ಶಾಸ್ತ್ರಿ ಅವರು ತಿಳಿಸಿದ್ದಾರೆ.
ದಾಸವಾಳ ಹೂವಿನಿಂದ ತಯಾರಿಸಿದ ತೈಲವನ್ನು ತಲೆಗೆ ತಿಕ್ಕುವುದರಿಂದ ನಿದ್ದೆ ಬಾರದವರಿಗೆ ಚೆನ್ನಾಗಿ ನಿದ್ದೆ ಬರುತ್ತದೆ. ಇದು ನೆತ್ತಿಗೆ ಸಂಬಂಧಿಸಿದ ರೋಗಗಳನ್ನೂ ಗುಣಪಡಿಸುವುದೆಂದು ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.