ADVERTISEMENT

50 ವರ್ಷಗಳ ಹಿಂದೆ ಪ್ರಜಾವಾಣಿ: ಮಂಗಳವಾರ, 12–1–1971

​ಪ್ರಜಾವಾಣಿ ವಾರ್ತೆ
Published 11 ಜನವರಿ 2021, 19:31 IST
Last Updated 11 ಜನವರಿ 2021, 19:31 IST
   

ವಿದ್ಯಾರ್ಥಿಗಳಿಗೆ ಶುಲ್ಕ ರಿಯಾಯಿತಿ ಸಂಬಂಧ ಪೋಷಕರ ವರಮಾನದ ಮಿತಿ

ಬೆಂಗಳೂರು, ಜ. 11– ಕಾಲೇಜುಗಳು, ಪಾಲಿಟೆಕ್ನಿಕ್‌ಗಳು ಮತ್ತು ಹೈಯರ್‌ ಸೆಕೆಂಡರಿ 11ನೇ ತರಗತಿಗಳಲ್ಲಿ ಫ್ರೀಷಿಪ್‌ ನೀಡಲು ತಂದೆ ತಾಯಿಗಳ ವಾರ್ಷಿಕ ವರಮಾನದ ಮಿತಿ 2,400 ರೂ. ಇದ್ದುದ್ದನ್ನು ಸರ್ಕಾರ 3,600ಕ್ಕೆ ಹೆಚ್ಚಿಸಿದೆ.

ಕಾಲೇಜುಗಳು, ಪಾಲಿಟೆಕ್ನಿಕ್‌ಗಳು ಮತ್ತು ಹೈಯರ್‌ ಸೆಕೆಂಡರಿ 11ನೇ ತರಗತಿಗಳಲ್ಲಿ ನೀಡಲಾಗುವ ಒಟ್ಟು ಫ್ರೀಷಿಪ್‌ಗಳಲ್ಲಿ ಅರ್ಧದಷ್ಟನ್ನು ವಾರ್ಷಿಕ 1,800 ರೂ.ಗಿಂತ ಕಡಿಮೆ ಆದಾಯವಿರುವವರ ಮಕ್ಕಳಿಗೆ ಪೂರ್ಣ ಫ್ರೀಷಿಪ್‌ ಆಗಿ ನೀಡಲಾಗುವುದು.

ADVERTISEMENT

ಒಂದು ತಿಂಗಳಲ್ಲಿ ಚಿಲ್ಲರೆ ನಾಣ್ಯದ ಅಭಾವ ಸುಧಾರಣೆ

ಬೆಂಗಳೂರು, ಜ. 11– ದೇಶದ ನಾನಾ ಕಡೆಗಳಲ್ಲಿ ಕಂಡುಬರುತ್ತಿರುವ ಚಿಲ್ಲರೆ ನಾಣ್ಯಗಳ ಅಭಾವ ಪರಿಸ್ಥಿತಿ ಇನ್ನು ಒಂದು ತಿಂಗಳಲ್ಲಿ ಕೆಲ ಮಟ್ಟಿಗೆ ಸುಧಾರಿಸುವ ಸೂಚನೆಗಳಿವೆ.

ಹಲವು ಬಗೆಯ ನಾಣ್ಯಗಳನ್ನು ಲೋಹದ ಆಸೆಗಾಗಿ ಕೆಲವರು ಕರಗಿಸಲಾರಂಭಿಸಿದ್ದೇ ನಾಣ್ಯದ ಅಭಾವಕ್ಕೆ ಕಾರಣವೆಂದು ಹೇಳಲಾಗಿದೆ. ಪರಿಸ್ಥಿತಿಯನ್ನು ಗಮನಿಸಿ ಟಂಕಸಾಲೆ ಸಾಕಷ್ಟು ನಾಣ್ಯಗಳನ್ನು ಬಿಡುಗಡೆ ಮಾಡುವ ಪ್ರಯತ್ನ ಕೈಗೊಂಡಿದೆಯೆಂದು ತಿಳಿದುಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.