ADVERTISEMENT

ಭಾನುವಾರ, 4–5–1969

​ಪ್ರಜಾವಾಣಿ ವಾರ್ತೆ
Published 3 ಮೇ 2019, 20:15 IST
Last Updated 3 ಮೇ 2019, 20:15 IST

ರಾಷ್ಟ್ರಪತಿ ಡಾ. ಜಾಕಿರ್ ಹುಸೇನ್ ನಿಧನ
ನವದೆಹಲಿ, ಮೇ 3– ತೀವ್ರ ಹೃದಯಾಘಾತದ ಕಾರಣ ರಾಷ್ಟ್ರಪತಿ ಡಾ. ಜಾಕಿರ್ ಹುಸೇನ್ ಅವರು ಇಂದು ಬೆಳಿಗ್ಗೆ 11.20ರ ಸಮಯದಲ್ಲಿ ಇಲ್ಲಿ ನಿಧನರಾಗಿ ಇಡೀ ರಾಷ್ಟ್ರ ದುಃಖ ಸಾಗರದಲ್ಲಿ ಮುಳುಗಿದೆ. ಡಾ. ಜಾಕಿರ್ ಹುಸೇನರಿಗೆ 72 ವರ್ಷ ವಯಸ್ಸಾಗಿತ್ತು.

ರಾಷ್ಟ್ರಪತಿ ಹೃದಯಾಘಾತದ ಕಾರಣ ಹಠಾತ್ತನೆ ಕುಸಿದರು. ಅವರನ್ನು ಪುನಶ್ಚೇತನಗೊಳಿಸಲು ವೈದ್ಯರ ತಂಡವು ಕೂಡಲೆ ನಡೆಸಿದ ಎಲ್ಲ ಪ್ರಯತ್ನ ವಿಫಲವಾಯಿತು.

ಡಾ. ಜಾಕಿರ್ ಹುಸೇನರು ಬೆಳಿಗ್ಗೆ 11.15ರಲ್ಲಿ ಶೌಚಗೃಹಕ್ಕೆ ಹೋದಾಗ ಅಲ್ಲಿಯೇ ಹೃದಯಾಘಾತಕ್ಕೊಳಗಾಗಿ ಕುಸಿದು ಬಿದ್ದು ನಿಧನರಾದರು.

ADVERTISEMENT

ಹಂಗಾಮಿ ರಾಷ್ಟ್ರಪತಿ ಗಿರಿ ಪ್ರಮಾಣ ಸ್ವೀಕಾರ
ನವದೆಹಲಿ, ಮೇ 3 –ರಾಜ್ಯಾಂಗ 65 (1)ನೆ ವಿಧಿಯನುಸಾರ ಉಪರಾಷ್ಟ್ರಪತಿ ವಿ.ವಿ. ಗಿರಿ ಅವರು ಇಂದು ಹಂಗಾಮಿ ರಾಷ್ಟ್ರಪತಿಯಾಗಿ ಪ್ರಮಾಣ ಸ್ವೀಕರಿಸಿದರು.

ರಾಷ್ಟ್ರಪತಿ ಭವನದ ಅಶೋಕ ಹಾಲ್‌ನಲ್ಲಿ ಮಧ್ಯಾಹ್ನ 4 ಗಂಟೆಯಲ್ಲಿ ಪ್ರಮಾಣ ಸ್ವೀಕಾರ ನಡೆಯಿತು.

ಅಧಿಕಾರದಲ್ಲಿ ಇದ್ದಾಗಲೇ ನಿಧನರಾದ ಮೊದಲ ರಾಷ್ಟ್ರಪತಿ
ನವದೆಹಲಿ, ಮೇ 3– ಅಧಿಕಾರದಲ್ಲಿರುವಾಗಲೇ ನಿಧನರಾದ ಮೊದಲ ರಾಷ್ಟ್ರಪತಿ ಡಾ. ಜಾಕಿರ್ ಹುಸೇನ್.

ನಾಲ್ಕನೆ ಸಾರ್ವತ್ರಿಕ ಚುನಾವಣೆ ನಡೆದ ನಂತರ ಇವರು ರಾಷ್ಟ್ರದ ಅತ್ಯುನ್ನತ ಅಧಿಕಾರ ಸ್ಥಾನಕ್ಕೆ ಮೂರನೆಯ ರಾಷ್ಟ್ರಪತಿಯಾಗಿ ಆಯ್ಕೆಯಾದರು. 1967ರ ಮೇ ತಿಂಗಳ ಒಂಬತ್ತರಂದು ಇವರು ಅಧಿಕಾರ ವಹಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.