ADVERTISEMENT

ಮಂಗಳವಾರ, 3–12–1968

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2018, 20:00 IST
Last Updated 2 ಡಿಸೆಂಬರ್ 2018, 20:00 IST
   

ಪಾನನಿರೋಧ: ರಾಷ್ಟ್ರೀಯ ಪ್ರಶ್ನೆ ಆಗಿ ಗಣಿಸಲು ಹೆಗಡೆ ಸಲಹೆ

ಬೆಂಗಳೂರು, ಡಿ. 2– ಪಾನ ನಿರೋಧ ನೀತಿಕುರಿತು ಸರ್ವ ಪಕ್ಷಗಳ ಸಮ್ಮೇಳನ ಒಂದು ನಿರ್ಧಾರಕ್ಕೆ ಬಂದು, ಅದನ್ನು ಕಾರ್ಯರೂಪಕ್ಕೆ ತರುವ ಬಗ್ಗೆ ರಾಷ್ಟ್ರೀಯ ಅಭಿವೃದ್ಧಿ ಮಂಡಳಿಯೊಡನೆ ಚರ್ಚಿಸಬೇಕೆಂದು ಅಬ್ಕಾರಿ ಹಾಗೂ ಅರ್ಥ ಸಚಿವ ಶ್ರೀ ರಾಮಕೃಷ್ಣ ಹೆಗಡೆ ಅವರು ಸಲಹೆ ಮಾಡಿದ್ದಾರೆ.

ಬ್ಯಾಂಕ್ ಮಸೂದೆಗೆ ಎಲ್ಲ ಪಕ್ಷಗಳ ವಿರೋಧ

ADVERTISEMENT

ನವದೆಹಲಿ, ಡಿ. 2– ಉಪಪ್ರಧಾನಿ ಮುರಾರಜಿ ದೇಸಾಯಿ ಇಂದು ರಾಜ್ಯಸಭೆಯಲ್ಲಿ ಮಂಡಿಸಿದ ಬ್ಯಾಂಕಿಂಗ್ ಶಾಸನ (ತಿದ್ದುಪಡಿ) ಮಸೂದೆ, 1968 ಅನ್ನು ಕಾಂಗ್ರೆಸ್ ಮತ್ತು ವಿರೋಧ ಪಕ್ಷಗಳ ಸದಸ್ಯರು ಉಗ್ರವಾಗಿ ಟೀಕಿಸಿದರು.

ಈ ಮಸೂದೆ ಬ್ಯಾಂಕುಗಳ ಮೇಲೆ ಸಾಮಾಜಿಕ ಹತೋಟಿ ವಿಸ್ತರಿಸಲು ಹಾಗೂ ರಿಸರ್ವ್‌ಬ್ಯಾಂಕ್ ಶಾಸನ ಮತ್ತು ಸ್ಟೇಟ್‌ ಬ್ಯಾಂಕ್ ಶಾಸನ ತಿದ್ದುಪಡಿಗೆ ಅವಕಾಶ ನೀಡುವುದು.

ವೈನಾಡ್‌ ಕಾಡಿನಲ್ಲಿ ಅಜಿತಾಳ ತಾಯಿ ಬಂಧನ

ಕಲ್ಲೀಕೋಟೆ, ಡಿ. 2– ಪ್ರಮುಖ ನಕ್ಸಲೀಯ ನಾಯಕ ಕುನ್ನಿಕಲ್ ನಾರಾಯಣ್ ಅವರಪತ್ನಿ ಶ್ರೀಮತಿ ಮಂದಾಕಿನಿ ನಾರಾಯಣ್‌ರನ್ನು ವೈನಾಡ್ ಅರಣ್ಯದಲ್ಲಿ ಪೊಲೀಸರು ಇಂದು ಬಂಧಿಸಿದರು. ಮಂದಾಕಿನಿ ಅವರು ಪುಲಪಲ್ಲಿ ಪೊಲೀಸ್ ಠಾಣೆ ಮೇಲೆ ದಾಳಿ ನಡೆಸಿದ ತಂಡದ ನಾಯಕಿ ಎನ್ನಲಾಗಿರುವ ಕುಮಾರಿ ಅಜಿತಾಳ ತಾಯಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.