ADVERTISEMENT

75 ವರ್ಷಗಳ ಹಿಂದೆ: ‘ನೀತಿಭ್ರಷ್ಟ ಸ್ಪರ್ಧಿಗಳಿಗೆ’ ವಿರುದ್ಧ ಪ್ರತಿಸ್ಪರ್ಧಿಗಳು

ಪ್ರಜಾವಾಣಿ ವಿಶೇಷ
Published 7 ನವೆಂಬರ್ 2025, 22:02 IST
Last Updated 7 ನವೆಂಬರ್ 2025, 22:02 IST
<div class="paragraphs"><p>75 ವರ್ಷಗಳ ಹಿಂದೆ ಈ ದಿನ</p></div>

75 ವರ್ಷಗಳ ಹಿಂದೆ ಈ ದಿನ

   

‘ನೀತಿಭ್ರಷ್ಟ ಸ್ಪರ್ಧಿಗಳಿಗೆ’ ವಿರುದ್ಧ ಪ್ರತಿಸ್ಪರ್ಧಿಗಳು

ಲೂದಿಯಾನ, ನ. 7– ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್‌ ಪಾರ್ಲಿಮೆಂಟರಿ ಸಮಿತಿಯು ನೀತಿನಿಷ್ಠೆಯಿಲ್ಲದವರಿಗೆ ಬೆಂಬಲ ಕೊಡುವುದಾದರೆ, ಆ ಹುರಿಯಾಳುಗಳಿಗೆ ವಿರುದ್ಧ ಪ್ರತಿ ಹುರಿಯಾಳುಗಳನ್ನು ನಿಲ್ಲಿಸಲು ನಾವು ಹಿಂಜರಿಯುವುದಿಲ್ಲ’ ಎಂಬುದಾಗಿ ಆಚಾರ್ಯ ಜೆ.ಬಿ. ಕೃಪಲಾನಿ ಅವರು, ಲೂದಿಯಾನದಲ್ಲಿ ಕಾಂಗ್ರೆಸ್‌ ಕೆಲಸಗಾರರನ್ನು ಉದ್ದೇಶಿಸಿ ಮಾತನಾಡುತ್ತಾ ಈ ವಿಷಯ ತಿಳಿಸಿದರು.

ADVERTISEMENT

ಮುಂಬರುವ ಚುನಾವಣೆಯಲ್ಲಿ ಏನೂ ಅನ್ಯಾಯಗಳಾಗದ ಪ್ರಜಾಪ್ರಭುತ್ವ ತತ್ತ್ವದ ರೀತಿಯಲ್ಲಿ ನಿಷ್ಪಕ್ಷ ಚುನಾವಣೆಗಳಾಗಲೆಂದೇ ಕಾಂಗ್ರೆಸ್ಸಿನಲ್ಲಿ ತಾವು ಒಂದು ಪಕ್ಷ ರಚಿಸಿರುವುದು ಎಂಬುದಾಗಿ ವಿವರಿಸಿದರು.