
ಪ್ರಜಾವಾಣಿ ವಾರ್ತೆಎಂ. ಶಾಮಣ್ಣನವರ ಮನೆಯಲ್ಲಿ ಕಳ್ಳತನ
ಬೆಂಗಳೂರು, ನ. 17– ಬಸವನ ಗುಡಿಯಲ್ಲಿರುವ ಸರ್ಕಾರದ ಹಣಕಾಸಿನ ಕಾರ್ಯದರ್ಶಿಗಳಾದ ಎಂ. ಶಾಮಣ್ಣನವರ ಮನೆಯಲ್ಲಿ ನಿನ್ನೆ ರಾತ್ರಿ ಯಾರೋ ಮನೆಗೆ ನುಗ್ಗಿ ದೇವರ ಮನೆಯಲ್ಲಿದ್ದ ಸುಮಾರು 400 ರೂ. ಬೆಲೆಬಾಳುವ ದೇವರ ಸಾಮಾನುಗಳನ್ನು ಕಳವು ಮಾಡಿಕೊಂಡು ಹೋಗಿದ್ದಾರೆಂದು ವರದಿಯಾಗಿದೆ.
ಇಂದು ಸಂಜೆ ಹೊತ್ತಿಗೆ ಪೊಲೀಸರು ಕಳವು ಮಾಲನ್ನು ಪತ್ತೆ ಮಾಡಿದರೆಂದು ತಿಳಿದುಬಂದಿದೆ. ಕಳವು ವರದಿಯಾದ ಕೂಡಲೇ ಡಿಎಸ್‌ಪಿ ನರಸಿಂಹಯ್ಯ ಹಾಗೂ ಎಎಸ್‌ಪಿ ಜನಾಬ್ ಜಹಿರುದ್ದೀನ್ ಅವರು, ಶಾಮಣ್ಣನವರ ಮನೆಗೆ ಭೇಟಿ ಕೊಟ್ಟು ಪರಿಶೀಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.