75 ವರ್ಷಗಳ ಹಿಂದೆ
ಮನೆ ಮಾರುವವರ ಹಂಬಲ; ಕೊಳ್ಳುವವರ ಅಭಾವ
ಟೋಕಿಯೊ, ಆಗಸ್ಟ್ 19– ಯುದ್ಧ ಭೀತಿಯಿಂದ ಗಾಬರಿಗೊಂಡಿರುವ ಟೋಕಿಯೊ ನಗರ ನಿವಾಸಿಗಳು ತಮ್ಮ ಮನೆಗಳನ್ನು ಮಾರಲು ಮುಂದೆ ಬಂದಿದ್ದಾರೆ. ನಗರದ ವಿಸ್ತರಣೆ ಗಳಲ್ಲೋ, ಸುತ್ತಮುತ್ತಲ ಹಳ್ಳಿಗಾಡಿನಲ್ಲೋ ಇದ್ದರೆ ತಾವು ರಕ್ಷಿತರಾಗುತ್ತೇ ವೆಂಬ ಆಸೆಯಿಂದ ಈ ನಡವಳಿಕೆ. ಆದರೆ, ಮನೆ ಕೊಳ್ಳಲು ಯಾರೂ ಇಚ್ಛಿಸುತ್ತಿಲ್ಲ. ಸ್ಥಿರ ಸ್ವತ್ತಿನ ವ್ಯಾಪಾರ ತೀರ ಕೆಳಮಟ್ಟಕ್ಕೆ ಇಳಿದಿದೆ ಎಂದು ಅಧಿಕಾರಿಯೊಬ್ಬರ ಪರಿಶೀಲನೆಯಿಂದ ವಿದಿತವಾಗಿದೆ ಎಂದು ಕಯೋಡೊ ಸುದ್ದಿಸಂಸ್ಥೆ ವರದಿ ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.