75 ವರ್ಷಗಳ ಹಿಂದೆ
ಆನೆ ಸಾಕಿ ನೋಡು; ಅರಮನೆ ಕಟ್ಟಿ ನೋಡು
ಅಲಂಗಂಜ್, ಆ. 28: 25 ವರ್ಷ ವಯಸ್ಸಿನ 5 ಟನ್ ತೂಕದ ಹೆಣ್ಣು ಆನೆ ಯೊಂದರ ಮಾಲಿಕರನ್ನ ಹುಡುಕುವ ಕೆಲಸ ಪೊಲೀಸರ ಪಾಲಿಗೆ ಬಂದಿದೆ.
ಹತ್ತು ದಿನಗಳ ಕೆಳಗೆ ಗಂಗೆಯ ರಭಸ ಪ್ರವಾಹದಲ್ಲಿ ಕೊಚ್ಚಿ ಬಂದಳು ಈ ಗಜಲಕ್ಷ್ಮಿ. ಕಂಡ ಜನ ಈಕೆಯನ್ನು ಗಂಗೆಯ ರೋಷದಿಂದ ಪಾರು ಮಾಡಿ ಪೊಲೀಸರ ಕೈ ತಲುಪಿಸಿದರು.
ಪಾಟ್ನಾದಿಂದ ಕಾಶಿಯವರೆಗಿನ ಸರ್ವ ಪೊಲೀಸ್ ನಿಲ್ದಾಣಗಳಿಗೂ ಸುದ್ದಿ ತಲುಪಿಸಲಾಗಿದೆ.
ಹತ್ತು ದಿನ ಈಕೆಯನ್ನು ಸಾಕಿ ಸೋತ ಪೊಲೀಸರು, ‘ಯಾರಾದರೂ ನಂದು ಅಂದರೆ ಸಾಕು ವಹಿಸಿ ಕೊಟ್ಟೇವು’ ಎಂದು ನುಡಿವ ಸ್ಥಿತಿಗೆ ಬಂದಿದ್ದಾರೆ.
ಸಾರ್ವತ್ರಿಕ ಚುನಾವಣೆ ಮುಂದೆ ಹೋಗಕೂಡದು
ಮುಂಬೈ, ಆ. 28: ಚುನಾವಣೆ ಇನ್ನೂ ತಡವಾಗಿ ನಡೆಯಬಹುದೆಂಬ ವರದಿಗೆ ದೇಶಾದ್ಯಂತ ತೀವ್ರ ವಿರೋಧ ಸೂಚಿಸುವುದು ಅತ್ಯಗತ್ಯ ಎಂದು ಪ್ರಕಟಣೆಯೊಂದರಲ್ಲಿ ಸ್ವಚ್ಛ ಮತ್ತು ಶುದ್ಧ ಚುನಾವಣಾ ಸಮ್ಮೇಳನದ ಸ್ಥಾಯೀ ಸಮಿತಿ ಇಂದು ಪ್ರಕಟಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.