ADVERTISEMENT

75 ವರ್ಷಗಳ ಹಿಂದೆ ಈ ದಿನ: ಕೇಂದ್ರದ ಹತೋಟಿ– ಮೈಸೂರಿಗೆ ವಿನಾಯಿತಿ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2025, 19:09 IST
Last Updated 23 ನವೆಂಬರ್ 2025, 19:09 IST
<div class="paragraphs"><p>75 ವರ್ಷಗಳ ಹಿಂದೆ ಈ ದಿನ</p></div>

75 ವರ್ಷಗಳ ಹಿಂದೆ ಈ ದಿನ

   

ಬೆಂಗಳೂರು, ನ. 22– ‘ಬಿ’ ವಿಭಾಗದ ಸಂಸ್ಥಾನಗಳ ಮೇಲೆ ಕೇಂದ್ರಕ್ಕಿರುವ ಮೇಲ್ವಿಚಾರಣೆ ಹಾಗೂ ಹತೋಟಿ ಅಧಿಕಾರಗಳಿಗೆ ಸಂಬಂಧಿಸಿದ ರಾಜ್ಯಾಂಗದ ವಿಧಿಗಳ ಬಗ್ಗೆ ಮೈಸೂರು ಸಂಸ್ಥಾನಕ್ಕೆ ಪೂರ್ಣ ವಿನಾಯಿತಿ ಕೊಡಲಾಗುವುದೆಂದು ಕೇಂದ್ರ ಸರ್ಕಾರ ಭರವಸೆಯಿತ್ತಿದೆ. ಈ ರೀತಿ ಮೈಸೂರಿಗೆ ವಿನಾಯಿತಿ ಕೊಟ್ಟು ರಾಷ್ಟ್ರಾಧ್ಯಕ್ಷರಿಂದ ನಿರ್ದಿಷ್ಟ ಆಜ್ಞೆ ಹೊರಡಿಸುವ ವಿಷಯವನ್ನು ಕೇಂದ್ರ ಸರ್ಕಾರ ಪರಿಶೀಲಿಸುತ್ತಿದೆ ಎಂದು ಮುಖ್ಯಮಂತ್ರಿ ಕೆ.ಸಿ. ರೆಡ್ಡಿ ಅವರು ಇಂದು ಅವರ ಚೇಂಬರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT