ADVERTISEMENT

75 ವರ್ಷಗಳ ಹಿಂದೆ ಈ ದಿನ: ಭಾರತದ ಪ್ರಧಾನಿಗೆ ರಂಗೂನ್‌ನಲ್ಲಿ ಪ್ರಚಂಡ ಸ್ವಾಗತ

​ಪ್ರಜಾವಾಣಿ ವಾರ್ತೆ
Published 20 ಜೂನ್ 2025, 19:25 IST
Last Updated 20 ಜೂನ್ 2025, 19:25 IST
   

ಭಾರತದ ಪ್ರಧಾನಿಗೆ ರಂಗೂನ್‌ನಲ್ಲಿ ಪ್ರಚಂಡ ಸ್ವಾಗತ

ರಂಗೂನ್‌, ಜೂನ್‌ 20– ಭಾರತದ ಪ್ರಧಾನಿ ಪಂಡಿತ ನೆಹರೂ ಅವರು ತಮ್ಮ ಪುತ್ರಿ ಇಂದಿರಾ ಗಾಂಧಿ ಮತ್ತು ಆಕೆಯ ಈರ್ವರು ಪುತ್ರರನ್ನೊಡಗೂಡಿ ಇಂದು ಪೆನಾಂಗ್‌ನಿಂದ ರಂಗೂನಿಗೆ ವಿಮಾನದಲ್ಲಿ ಆಗಮಿಸಿದರು.ಬರ್ಮಾದ ಪ್ರಧಾನಿ ಥುಕಿನ್‌ನೂ ಮತ್ತು ಇತರ ಸಚಿವರು ಭಾರತದ ಪ್ರಧಾನಿಗೆ ಸುಸ್ವಾಗತ ನೀಡಿದರು.

ದಕ್ಷಿಣ ಆಫ್ರಿಕಾ ಪ್ರಧಾನಿ ಗೃಹಕ್ಕೆ ಬೆಂಕಿ

ADVERTISEMENT

ಕೇಪ್‌ಟೌನ್‌, ಜೂನ್‌ 20– ದಕ್ಷಿಣ ಆಫ್ರಿಕಾ ಪ್ರಧಾನಿ ಮಾಲನ್‌ ಅವರ ವಸತಿ ಗೃಹಕ್ಕೆ ಈ ಬೆಳಿಗ್ಗೆ ಬೆಂಕಿ ಬಿದ್ದಾಗ ಹೊರ ಪಾರ್ಶ್ವದ ಬಾಲ್ಕನಿಯಲ್ಲಿದ್ದ ಡಾ.ಮಾಲನ್‌ ಮತ್ತು ಅವರ ದತ್ತು ಪುತ್ರಿ ಮೇರೀಟ್ಯ ಅವರನ್ನು ಅಗ್ನಿಶಾಮಕ ಪಡೆಯವರು ಪಾರು ಮಾಡಿದರು. ಶ್ರೀಮತಿ ಮಾಲನ್‌ ಯಾರ ನೆರವಿಲ್ಲದೆಯೇ, ಹೊಗೆ ತುಂಬಿದ್ದ ಮನೆಯಿಂದ ಹೊರಗೆ ಬಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.