
ಪ್ರಜಾವಾಣಿ ವಿಶೇಷ
75 ವರ್ಷಗಳ ಹಿಂದೆ ಈ ದಿನ
ಮೈಸೂರು ರೆಗ್ಯುಲೇಟೆಡ್ ಮಾರ್ಕೆಟ್ ಪ್ರಕರಣ
ಮೈಸೂರು, ನ. 24– ಮೈಸೂರಿನಲ್ಲಿ ಸ್ಥಾಪಿತವಾಗಿರುವ ರೆಗ್ಯುಲೇಟೆಡ್ ಮಾರ್ಕೆಟ್ಟಿನ ವ್ಯವಸ್ಥೆ ತುಂಬಾ ಅನನುಕೂಲಗಳಿಂದ ಕೂಡಿರುವುದರಿಂದ ಅವನ್ನೆಲ್ಲ ಸರಿಪಡಿಸುವವರೆಗೆ ಬಹಿಷ್ಕಾರ ಹಾಕುವುದಾಗಿ ಸ್ಥಳೀಯ ವರ್ತಕರುಗಳ ಸಂಘದವರು 19ನೇ ತಾರೀಕು ನಿರ್ಣಯ ಮಾಡಿ ಕಳಿಸಿದರಷ್ಟೆ. ನಿನ್ನೆ ಸಂಜೆ ಸಂಸ್ಥಾನದ ಮುಖ್ಯ ಮಾರ್ಕೆಟಿಂಗ್ ಅಧಿಕಾರಿಗಳಾದ ಎನ್.ಎಸ್. ಹಿರಣ್ಣಯ್ಯನವರು, ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ರೆಗ್ಯುಲೇಟೆಡ್ ಮಾರ್ಕೆಟ್ಟಿನ ಸಮಿತಿಯ ಸದಸ್ಯರುಗಳ ಮತ್ತು ಸ್ಥಳೀಯ ವರ್ತಕರುಗಳ ಸಭೆ ಕೂಡಿಸಿ, ಆದಷ್ಟು ಬೇಗ ಮಾರ್ಕೆಟ್ಟಿನ ಲೋಪದೋಪಗಳನ್ನು ನಿವಾರಣೆ ಮಾಡಲಾಗುವುದೆಂದೂ, ವರ್ತಕರುಗಳು ಸಹಕರಿಸಬೇಕೆಂದು ಕೋರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.