ADVERTISEMENT

75 ವರ್ಷಗಳ ಹಿಂದೆ | ಉಕ್ಕಿನ ಕೈಗಾರಿಕೆ; ವಿಸ್ತರಣೆ ಯೋಜನೆ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2025, 22:30 IST
Last Updated 12 ಡಿಸೆಂಬರ್ 2025, 22:30 IST
<div class="paragraphs"><p>75 ವರ್ಷಗಳ ಹಿಂದೆ ಈ ದಿನ</p></div>

75 ವರ್ಷಗಳ ಹಿಂದೆ ಈ ದಿನ

   

ನವದೆಹಲಿ, ಡಿ. 12– ಭಾರತದಲ್ಲಿ ಕಬ್ಬಿಣ ಮತ್ತು ಉಕ್ಕಿನ ಪ್ರಮುಖ ಉತ್ಪಾದಕರ ವಿಸ್ತರಣೆ ಯೋಜನೆ ಕಾರ್ಯಗತವಾದರೆ ಈಗ ಕೆಲಸ ಮಾಡುತ್ತಿರುವ ಕಾರ್ಖಾನೆಗಳಲ್ಲಿ ಉತ್ಪಾದನೆ ನಾಲ್ಕೂವರೆ ಲಕ್ಷ ಟನ್‌ ಗಳಷ್ಟು ಹೆಚ್ಚುವುದು.

ಕಳೆದ ಶನಿವಾರ ಯೋಜನಾ ಸಮಿತಿಯು ತಯಾರಕರ ಮತ್ತು ಸರ್ಕಾರದ ಪ್ರತಿನಿಧಿಗಳೊಡನೆ ಕಬ್ಬಿಣ ಮತ್ತು ಉಕ್ಕಿನ ಕೈಗಾರಿಕೆಯ ಅಭಿವೃದ್ಧಿ ಯೋಜನೆಯ ಬಗ್ಗೆ ಚರ್ಚಿಸಿದಾಗ ಈ ಅಂಶ ಹೊರಬಿತ್ತು.

ADVERTISEMENT

ನೂರು ಗಂಟೆಗಳ ಕಾಲ ನೆಲ ಸಮಾಧಿಯಾಗಿದ್ದ ಯೋಗಿ

ಬರೇಲಿ, ಡಿ. 12– ಬ್ರಹ್ಮಋಷಿ ಶಾಂತಾನಂದ ನರಸಿಂಹ ಯೋಗಿಶ್ವರ ಎಂಬ ಯೋಗಿಯು ನಿನ್ನೆ 100 ಗಂಟೆಗಳ ಕಾಲ ನೆಲಸಮಾಧಿಯಲ್ಲಿ ಇದ್ದರು.

ಸಮಾಧಿಗೆಂದು ತೆಗೆಯಲಾಗಿದ್ದ ಗುಂಡಿಯೊಳಕ್ಕೆ ಅವರು ಇಳಿದ ಮೇಲೆ ಬಾಯಿಯ ಮುಚ್ಚಿಗೆಯನ್ನು ಸಿಮೆಂಟಿನಿಂದ ಭದ್ರಪಡಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.