
ಪ್ರಜಾವಾಣಿ ವಾರ್ತೆಬೆಂಗಳೂರು, ನ.21– ಸಂಸ್ಥಾನದಲ್ಲಿ, ಅದರಲ್ಲೂ ಬೆಂಗಳೂರು ನಗರದಲ್ಲಿ ಸಕ್ಕರೆ ಹಾಗೂ ಗೋಧಿ ದಾಸ್ತಾನು ಪರಿಸ್ಥಿತಿ ಉತ್ಕಟವಾಗಿದೆ. ಗೋಧಿ ಮತ್ತು ಸಕ್ಕರೆಯನ್ನು ತತ್‌ಕ್ಷಣ ಸರಬರಾಜು ಮಾಡಬೇಕು ಎಂದು ಸರ್ಕಾರ ಕೇಂದ್ರವನ್ನು ಒತ್ತಾಯ ಮಾಡಿದೆ.
ಆಹಾರ ಸಚಿವ ಟಿ.ಮರಿಯಪ್ಪನವರು ಇಂದು ಇತ್ತ ಭೇಟಿಯಲ್ಲಿ ನವೆಂಬರ್ ತಿಂಗಳಿಗೆ ಕೆಂದ್ರ ಸರ್ಕಾರ ಅಲಾಟ್ ಮಾಡಿದ್ದ 13 ಸಾವಿರ ಟನ್ ಆಹಾರಧಾನ್ಯದಲ್ಲಿ ಒಂದು ಕಾಳು ಇನ್ನೂ ಸರಬರಾಜು ಆಗಿಲ್ಲವೆಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.