ADVERTISEMENT

75 ವರ್ಷಗಳ ಹಿಂದೆ: ನಿರಾಶ್ರಿತರ ಕೆಚ್ಚು

ಪ್ರಜಾವಾಣಿ ವಿಶೇಷ
Published 20 ಆಗಸ್ಟ್ 2025, 23:25 IST
Last Updated 20 ಆಗಸ್ಟ್ 2025, 23:25 IST
<div class="paragraphs"><p>75 ವರ್ಷಗಳ ಹಿಂದೆ</p></div>

75 ವರ್ಷಗಳ ಹಿಂದೆ

   

ನಿರಾಶ್ರಿತರ ಕೆಚ್ಚು

ಅಹ್ಮದಾಬಾದ್‌, ಆಗಸ್ಟ್‌ 20– ನಿರಾಶ್ರಿತರ ಗುಂಪೊಂದು ಅಹ್ಮದಾಬಾದ್‌ ಹೊರವಲಯದಲ್ಲಿರುವ ನಿರಾಶ್ರಿತರ ನಗರ–ಕುಟೀರ ನಗರದ ಬಳಿ ಓಡುತ್ತಿದ್ದ ರೈಲೊಂದನ್ನು ಅಪಾಯದ ಸರಪಳಿ ಎಳೆದು ನಿಲ್ಲಿಸಿ, ಅದರಲ್ಲಿದ್ದ ಇಬ್ಬರು ನಿರಾಶ್ರಿತ ಬಂದಿಗಳೊಡನೆ ಪರಾರಿಯಾಗಿದೆ.

ADVERTISEMENT

ಈ ಇಬ್ಬರು ಬಂದಿಗಳನ್ನು 211 ಮಣ ತೂಗುವಳಿ ಮೂಟೆ ಸಕ್ಕರೆ ಸಾಗಿಸಿದ ಆಪಾದನೆ ಮೇಲೆ ಬಂಧಿಸಿ ಕೋಳ ಹಾಕಿ ಕರೆದೊಯ್ಯಲಾಗುತ್ತಿತ್ತು. ಬಂದಿಗಳ ಜೊತೆಯಿದ್ದ ಇಬ್ಬರು ಪೊಲೀಸರಿಗೂ ಹೊಡೆದಿದ್ದಾರೆಂದು ವರದಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.