75 ವರ್ಷಗಳ ಹಿಂದೆ
ವಿಶ್ವಸಂಸ್ಥೆ ಕಮ್ಯುನಿಸ್ಟ್ ಪ್ರಾತಿನಿಧ್ಯಕ್ಕೆ ನೆಹರೂ ಒತ್ತಾಯ
ನವದೆಹಲಿ, ಜುಲೈ– ಭಾರತದ ಪ್ರಧಾನಿ ಪಂಡಿತ ಜವಾಹರ ಲಾಲ್ ನೆಹರೂ ಸೋವಿಯತ್ ರಷ್ಯಾ ಪ್ರಧಾನಿ ಮಾರ್ಷಲ್ ಸ್ಟಾಲಿನ್‌ರವರಿಗೂ, ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಡೀನ್ ಅಚಿಸನ್‌ರವರಿಗೂ ಖಾಸಗಿ ಪತ್ರಗಳನ್ನು ಬರೆದು ಕೊರಿಯನ್ ಕಲಹವನ್ನು ಶಾಂತ ರೀತಿಯಲ್ಲಿ ಬೇಗ ಇತ್ಯರ್ಥಪಡಿಸಬೇಕೆಂದು ಕೋರಿದ್ದಾರೆ.
ಈ ಕುರಿತು ಭಾರತದ ವಿದೇಶಾಂಗ ಸಚಿವ ಶಾಖೆ ಈ ದಿನ ಪ್ರಕಟಿಸಿದೆ. ಬ್ರಿಟಿಷ್ ಪ್ರಧಾನಿ ಕ್ಲೆಮೆಂಟ್ ಆಟ್ಲಯವರೊಂದಿಗೂ ನೇರ ಸಂಪರ್ಕವಿಟ್ಟುಕೊಂಡಿದ್ದಾರೆಂದೂ ಪ್ರಕಟಿಸಲಾಗಿದೆ.
ಸಚಿವ ಶಾಖೆಯ ಪತ್ರಿಕಾ ಪ್ರಕಟಣೆ ‘ಕೊರಿಯಾ ಸಂಗ್ರಾಮ ಆರಂಭವಾದಂದಿನಿಂದಲೂ ಕಲಹದ ಶಾಂತಿಯುತ ಇತ್ಯರ್ಥಕ್ಕಾಗಿ ಭಾರತ, ಲಂಡನ್, ವಾಷಿಂಗ್‌ಟನ್ ಮತ್ತು ಮಾಸ್ಕೋಗಳಲ್ಲಿರುವ ತನ್ನ ರಾಯಭಾರಿ ಕಚೇರಿಗಳ ಮೂಲಕ ಪ್ರಯತ್ನಿಸುತ್ತಲೇ ಇದೆ.
****
ಕೃಷ್ಣರಾಜಸಾಗರ ವಿಚಾರಣಾ ಸಮಿತಿ ಸಭೆ
ಬೆಂಗಳೂರು, ಜುಲೈ 14– ಇಂದು ಪ್ರಾತಃಕಾಲ ಕೃಷ್ಣರಾಜಸಾಗರ ವಿಚಾರಣಾ ಸಮಿತಿ ಸಮಾವೇಶಗೊಂಡು, ಸಾಗರ ಕೆಲಸ ಮಾಡುತ್ತಿರುವ ಬಗ್ಗೆ ಸರ್ಕಾರ ಒದಗಿಸಿರುವ ಕೆಲವು ಅಂಕಿ ಅಂಶಗಳನ್ನು ಪರಿಶೀಲಿಸಿತು. ಈ ಸಮಿತಿ ಪುನಃ ಜುಲೈ ಅಂತ್ಯಕ್ಕೆ ಸೇರುವುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.