ADVERTISEMENT

75 ವರ್ಷಗಳ ಹಿಂದೆ: ಐವತ್ತು ಸಹಸ್ರ ಕಮ್ಯುನಿಸ್ಟರ ಉಗ್ರ ಪ್ರತಿದಾಳಿ

75 ವರ್ಷಗಳ ಹಿಂದೆ: ಬುಧವಾರ–14–2–1951

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2026, 23:30 IST
Last Updated 13 ಫೆಬ್ರುವರಿ 2026, 23:30 IST
<div class="paragraphs"><p>75 ವರ್ಷಗಳ ಹಿಂದೆ ಈ ದಿನ</p></div>

75 ವರ್ಷಗಳ ಹಿಂದೆ ಈ ದಿನ

   

ಟೋಕಿಯೋ, ಫೆ. 13– ಮಧ್ಯರಂಗದಲ್ಲಿ ಐವತ್ತು ಸಹಸ್ರವನ್ನೂ ಮೀರಿದ ಕಮ್ಯುನಿಸ್ಟ್ ಸೇನಾ ಪಡೆ ಇಂದು ಭಾರಿ ಪ್ರತಿಭಟನೆ ಕೈಗೊಂಡು ವಿಶ್ವಸಂಸ್ಥೆ ಸಾಲಿನೊಳಕ್ಕೆ ಏಳು ಮೈಲಿ ದೂರ ನುಗ್ಗಿವೆ.

ವೊನ್ಜವಿಗೆ 10 ಮೈಲಿ ಉತ್ತರದಲ್ಲಿರುವ ಹೊಯಂಗ್ಯಂಗ್ ಮತ್ತು 18 ಮೈಲಿ ಪಶ್ಚಿಮದಲ್ಲಿರುವ ಚಿಪ್ಯಾಂಗ್ ಮಧ್ಯದಲ್ಲಿರುವ ವಿಶ್ವಸಂಸ್ಥೆಯ ಸೇನಾ ನೆಲೆಗಳ ಮಧ್ಯೆ ಕಮ್ಯುನಿಸ್ಟರು ಬಿರುಗಾಳಿಯಂತೆ ರಭಸದಿಂದ ನುಗ್ಗಿ ಬಂದರು.

ADVERTISEMENT

ಭಾರಿ ಪ್ರಮಾಣದಲ್ಲಿ ವಿಮಾನ ದಾಳಿ ಹಾಗೂ ಫಿರಂಗಿ ಗುಂಡಿನ ಮಳೆ ಆಗುತ್ತಿದ್ದರೂ ಲೆಕ್ಕಿಸದೆ ಸುಮಾರು 4ರಿಂದ 6 ಡಿವಿಜನ್‌ಗಳಷ್ಟು ಚೀಣೀ ಮತ್ತು ಉತ್ತರ ಕೊರಿಯನ್ ಸೈನಿಕರು ಹಾಂಗ್‌ಚಾನ್‌ನಿಂದ ದಕ್ಷಿಣಕ್ಕೆ ಪರ್ವತಗಳ ಕಣಿವೆಯಲ್ಲಿ ನುಗ್ಗಿ ಬಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.