75 ವರ್ಷಗಳ ಹಿಂದೆ
ಮೈಸೂರಿನಲ್ಲಿ ಮಹಾ ಚುನಾವಣೆ
ಬೆಂಗಳೂರು, ಜುಲೈ 13– ಸುಮಾರು 40 ಲಕ್ಷ ಮತದಾರರನ್ನು ಪಟ್ಟಿಗೆ ಸೇರಿಸಲು 10 ಸಾವಿರ ಮಂದಿ 4 ಗಂಟೆಗಳಿಗಿಂತ ಹೆಚ್ಚಿನ ಕೆಲಸ ಮಾಡಿದ್ದಾರೆ. ಮತದಾರರ ಪಟ್ಟಿ ತಯಾರಿಸಲು ಸುಮಾರು 15 ಲಾರಿಗಳ ತುಂಬ ಅಥವಾ 40 ಟನ್ ಪೇಪರ್ ಬೇಕಾಗಬಹುದು. ಪಟ್ಟಿಯನ್ನು ಹರಡಿದಲ್ಲಿ 2 ಸಾವಿರ ಮೈಲಿಗಿಂತ ಉದ್ದವಿರುವುದು. ಮೈಸೂರಿನ ಸೆನ್ಸಸ್ ಕಮಿಷನರ್ ಜೆ.ಬಿ. ಮಲ್ಲಾರಾಧ್ಯರು ಇಂದು ನಮ್ಮ ಪ್ರತಿನಿಧಿಗಿತ್ತ ಭೇಟಿಯಲ್ಲಿ ಈ ವಿಷಯಗಳನ್ನು ತಿಳಿಸಿದರು.
ನಿರಾಶ್ರಿತ ಮಹಿಳೆಗೆ ತ್ರಿವಳಿ ಮಕ್ಕಳು
ಸಿಲ್‌ಜಾರ್ (ಅಸ್ಸಾಂ), ಜುಲೈ 13– ಜಿಲ್ಲೆಯ ಆಸ್ಪತ್ರೆಯೊಂದರಲ್ಲಿ ನಿರಾಶ್ರಿತ ಮಹಿಳೆಯೊಬ್ಬರು ಕಳೆದ ಶನಿವಾರ ತ್ರಿವಳಿ ಮಕ್ಕಳನ್ನು ಹಡೆದರೆಂದು ತಿಳಿದುಬಂದಿದೆ.
ಅವುಗಳಲ್ಲಿ ಎರಡು ಗಂಡು ಮಕ್ಕಳು. ತಾಯಿ ಮತ್ತು ಶಿಶುಗಳು ಆರೋಗ್ಯದಿಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.