ಹೈದರಾಬಾದ್, ಅ.7– ‘ಮಹಾತ್ಮ ಗಾಂಧಿ ಅವರ ತತ್ವಗಳನ್ನು ಉಗ್ರನಿಷ್ಠೆಯಿಂದ ಅನುಸರಿಸುವುದರಿಂದ ಮಾತ್ರವೇ ರಾಷ್ಟ್ರ ನಿರ್ಮಾಪಕನಿಗೆ ತಕ್ಕ ಗೌರವ ಸಲ್ಲಿಸಲು ಸಾಧ್ಯ. ಸ್ಮಾರಕಗಳು ಭಾವಿ ಜನಾಂಗಕ್ಕೆ, ಮಹಾಪುರುಷ ರಾಷ್ಟ್ರಕ್ಕೆ ಸಲ್ಲಿಸಿದ ಮಹಾ ಕಾಣಿಕೆಯನ್ನು ನೆನಪು ಮಾಡಬಲ್ಲವು ಅಷ್ಟೆ’ ಎಂಬುದಾಗಿ ಸರದಾರ್ ವಲ್ಲಭಭಾಯ್ ಪಟೇಲರು ಇಂದು ಗಾಂಧಿಭವನದ ಶಂಕುಸ್ಥಾಪನೆ ಮಾಡುತ್ತ ನುಡಿದರು.
ಬೆಂಗಳೂರು, ಅ. 7– ಇಂದು ಸಂಜೆ ನರಹರಿರಾಯರ ಗುಡ್ಡದಲ್ಲಿ ನಡೆದ ವಿಮಾನ ಕಾರ್ಖಾನೆ ಕೆಲಸಗಾರರ ಸಂಘದ ಸರ್ವಸದಸ್ಯರ ಸಭೆಯಲ್ಲಿ ಕಾರ್ಖಾನೆಯ ಕೆಲಸಗಾರರು ಕೆಲಸಕ್ಕೆ ವಾಪಸಾಗಬೇಕೆಂಬ ನಿರ್ಣಯ ಬಹುಮತದಿಂದ ಅಂಗೀಕೃತವಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.