
25 ವರ್ಷಗಳ ಹಿಂದೆ ಈ ದಿನ
ಸೋಮವಾರ, 19–02–2001
ಬೈಂದೂರು, ಫೆ. 18– ಬೈಂದೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಕೆ. ಗೋಪಾಲ ಪೂಜಾರಿ ಅವರಿದ್ದ ಕಾರನ್ನು ನಿನ್ನೆ ಸಂಜೆ ಸಮೀಪದ ನಾವುಂದ ಗ್ರಾಮದಲ್ಲಿ ಕೆಲವರು ತಡೆದು ಹಲ್ಲೆ ನಡೆಸುವ ಪ್ರಯತ್ನ ನಡೆಸಿದ್ದಾರೆ.
ಈ ಪರಿಸರದಲ್ಲಿ ನಡೆಯುತ್ತಿರುವ ಮೀನು ಕಾರ್ಖಾನೆ ಸ್ಥಗಿತಗೊಳಿಸಲು ಒತ್ತಾಯಿಸಿದರು. ಕಾರ್ಖಾನೆಯವರು ಉಚ್ಚ ನ್ಯಾಯಾಲಯದ ತಡೆಯಾಜ್ಞೆ ತಂದಿರುವುದರಿಂದ ಯಾವುದೇ ಕ್ರಮ ಅಸಾಧ್ಯ ಎಂದು ಶಾಸಕರು ಹೇಳಿದರು. ಇದಕ್ಕೆ ಒಪ್ಪದ ಗುಂಪು ಅವಾಚ್ಯ ಶಬ್ದಗಳಿಂದ ನಿಂದಿಸಿ, ಕಾರನ್ನು ಗುದ್ದಿ, ತಮ್ಮ ಮೇಲೂ ಹಲ್ಲೆ ಯತ್ನ ಮಾಡಿ ಅವಮಾನಕರ ರೀತಿಯಲ್ಲಿ ವರ್ತಿಸಿದ್ದಾರೆಂದು ಪೊಲೀಸರಲ್ಲಿ ದೂರು ದಾಖಲಿಸಿದ್ದಾರೆ.
ಕೊಪ್ಪ, ಎನ್‌ಆರ್‌ಪುರದಲ್ಲಿ ಮಂಗನ ಕಾಯಿಲೆ
ಚಿಕ್ಕಮಗಳೂರು, ಫೆ. 18– ಜಿಲ್ಲೆಯ ನರಸಿಂಹರಾಜಪುರ, ಕೊಪ್ಪ ತಾಲ್ಲೂಕುಗಳ ಐದಾರು ಗ್ರಾಮಗಳಲ್ಲಿ ಸುಮಾರು 50 ಮಂದಿಗೆ ಮಂಗನ ಕಾಯಿಲೆ ಕಾಣಿಸಿಕೊಂಡಿದ್ದು ಜನರು ಆತಂಕಕ್ಕೆ ಒಳಗಾಗಿದ್ದಾರೆ.
ಮಂಗನ ಕಾಯಿಲೆ ತಗುಲಿರುವುದನ್ನು ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿಗಳು ಖಚಿತಪಡಿಸಿದ್ದು, ವ್ಯಾಪಕ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದಾರೆ. ಸಂಚಾರಿ ಆಸ್ಪತ್ರೆಯನ್ನೂ ತೆರೆದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.